ಮೇಘಾಲಯ: ಸುರಕ್ಷತೆಗಾಗಿ ಪೂರ್ವ ಖಾಸಿ ಹಿಲ್ಸ್ ಜಿಲ್ಲೆಯಲ್ಲಿ ಚಾರಣ ಮಾಡುವಾಗ ಪ್ರವಾಸಿಗರು ಅಧಿಕೃತ ಮತ್ತು ಮಾನ್ಯತೆ ಪಡೆದ ಮಾರ್ಗದರ್ಶಿಗಳನ್ನು ನೇಮಿಸಿಕೊಳ್ಳುವುದನ್ನು ಮೇಘಾಲಯವು ಕಡ್ಡಾಯಗೊಳಿಸಿದೆ ಎಂದು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪ್ರವಾಸೋದ್ಯಮ ಪ್ರಮೋಷನ್ ಸೊಸೈಟಿಯ ಅಧ್ಯಕ್ಷರು ತಿಳಿಸಿದ್ದಾರೆ.
ಮಧ್ಯಪ್ರದೇಶದ ಇಂದೋರ್‌ನ ಉದ್ಯಮಿಯೊಬ್ಬರು ಮೇಘಾಲಯದಲ್ಲಿ ತಮ್ಮ ಹನಿಮೂನ್ ಸಂದರ್ಭದಲ್ಲಿ ಅವರ ಪತ್ನಿಯಿಂದ ಕೊಲ್ಲಲ್ಪಟ್ಟ ಬಳಿಕ ಈ ನಿರ್ಧಾವರನ್ನು ಕೈಗೊಳ್ಳಲಾಗಿದೆ.
ಈ ಹತ್ಯೆಯು ಮೇಘಾಲಯದಲ್ಲಿ ಮಾತ್ರವಲ್ಲದೆ ಇಡೀ ಈಶಾನ್ಯದಲ್ಲಿ ಅತಿ ಹೆಚ್ಚು ಪ್ರವಾಸಿಗರನ್ನು ನೋಡುವ ಜಿಲ್ಲೆಯಾದ ಪೂರ್ವ ಖಾಸಿ ಹಿಲ್ಸ್‌ನಲ್ಲಿರುವ ವೈ ಸಾವ್‌ಡಾಂಗ್ ಜಲಪಾತದ ಬಳಿ ನಡೆದಿತ್ತು.
ಇದೊಂದು ಕೊಲೆ ಪ್ರಕರಣ ಎಂದು ತಿಳಿಯುತ್ತಿದ್ದ ಹಾಗೇ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿತು. ಅದಲ್ಲದೆ ಪ್ರವಾಸಕ್ಕೆ ಮೇಘಾಲಯ ಸುರಕ್ಷಿತವಲ್ಲ ಎಂಬ ಚರ್ಚೆಯೂ ಹುಟ್ಟಿಕೊಂಡಿತು.
ಇಂದೋರ್ ದಂಪತಿಗಳಾದ ರಾಜಾ ರಘುವಂಶಿ ಮತ್ತು ಸೋನಮ್‌ಗೆ ಸಂಬಂಧಿಸಿದ ಪ್ರಕರಣದ ನಂತರ, ಕೆಲವರು ತಮ್ಮ ಬುಕಿಂಗ್ ಅನ್ನು ರದ್ದುಗೊಳಿಸಿದ್ದಾರೆ ಮತ್ತು ಇನ್ನೂ ಅನೇಕರು ಆತಂಕ ವ್ಯಕ್ತಪಡಿಸಿದ್ದಾರೆ.
ಅದರ ಬೆನ್ನಲ್ಲೇ ಪ್ರವಾಸಿಗರ ಸುರಕ್ಷತೆಗಾಗಿ ಪೂರ್ವ ಖಾಸಿ ಹಿಲ್ಸ್ ಜಿಲ್ಲೆಯಲ್ಲಿ ಚಾರಣ ಮಾಡುವಾಗ ಪ್ರವಾಸಿಗರು ಅಧಿಕೃತ ಮತ್ತು ಮಾನ್ಯತೆ ಪಡೆದ ಮಾರ್ಗದರ್ಶಿಗಳನ್ನು ನೇಮಿಸಿಕೊಳ್ಳುವುದನ್ನು ಮೇಘಾಲಯವು ಕಡ್ಡಾಯಗೊಳಿಸಿದೆ.