Select Your Language

Notifications

webdunia
webdunia
webdunia
webdunia

ನಿರಂತರ ಮಳೆಗೆ ಬಂಡೆ ಕುಸಿತದಿಂದ ಭೂಮಿ ಕಂಪನ

p
bangalore , ಭಾನುವಾರ, 11 ಸೆಪ್ಟಂಬರ್ 2022 (20:26 IST)
ಮಹಾಮಳೆಗೆ ರಾಜಧಾನಿ ಬೆಂಗಳೂರಿನಲ್ಲಿ ಒಂದರ ನಂತರ ಒಂದು ಅನಾಹುತಗಳು ಸಂಭವಿಸುತ್ತಿದೆ.ನಿರಂತರ ಮಳೆಗೆ ಬೆಂಗಳೂರಿನ ರಾಜರಾಜೇಶ್ವರಿನಗರದಲ್ಲಿ ಬೃಹದಾಕಾರದ ಬಂಡೆ  ಕುಸಿತದಿಂದ ಭೂಮಿ ನಡುಗಿದೆ.
 
 
ರಾಜರಾಜೇಶ್ವರಿ ನಗರದ ಗಿರಿಧಾಮ ಬಡಾವಣೆಯಲ್ಲಿ ಬಂಡೆ ಜಾರಿ ಜನರಲ್ಲಿ ಆತಂಕ ಉಂಟಾಗಿದೆ.20 ಟನ್ ತೂಕದ ಬಂಡೆ ಉರುಳಿ ಸ್ವಲ್ಪದರಲ್ಲೇ  ಭಾರಿ‌ ಅನಾಹುತ ತಪ್ಪಿದೆ.ಅದೃಷ್ಟವಶಾತ್ ಬಂಡೆ ಮನೆಗೆ ಬಡಿಯದೇ ಅಲ್ಲೇ ಕೂತಿರುವ ಕಾರಣ  ಜನರು ಸೇಫ್ ಅಗಿದ್ದಾರೆ.
 
ಇಷ್ಟು ದೊಡ್ಡ ಅನಾಹುತ ಸಂಭವಿಸಿದರೂ  ಅಧಿಕಾರಿಗಳು ಮಾತ್ರ ಕ್ಯಾರೆ ಅಂದಿಲ್ಲ.ಒಬ್ಬರ ಮೇಲೆ ಒಬ್ಬರು ಜವಬ್ದಾರಿಯಿಂದ ವರ್ಗಾವಣೆ ಹಾಕ್ತಿದ್ದಾರೆ. ಈ ಜಾಗ ಪುರಾತತ್ವ ಇಲಾಖೆಯದ್ದು ಎಂದು ಬಿಬಿಎಂಪಿ ಕೈ ತೊಳೆದುಕೊಂಡಿದೆ.ಪುರಾತತ್ವ ಇಲಾಖೆಯಿಂದ ಈ ತನಕ ಯಾರೊಬ್ಬ ಅಧಿಕಾರಿಯೂ ಸ್ಥಳಕ್ಕೆ ಬಾರದೇ ಮೊಂಡಾಟ ಪ್ರದರ್ಶಿಸಿದ್ದಾರೆ.ಪುರಾತತ್ವ ಇಲಾಖೆಗೆ ನೂರು ಸಲ ಕರೆ ಮಾಡಿದ್ರೂ ಯಾವುದೇ ಪ್ರಯೋಜನವಾಗಿಲ್ಲ.ಯಾವಾಗ ಬೇಕಾದ್ರೂ ಬಂಡೆ ಮತ್ತೆ ಜಾರುವ ಆತಂಕ ಜನರಲ್ಲಿ ಆವರಿಸಿದೆ.ಬಂಡೆ ಕುಸಿತದಿಂದ ಅಕ್ಕಪಕ್ಕದ ನಿವಾಸಿಗಳು ಆತಂಕದಲ್ಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಂಟ್ರಿ ಸೈಡ್ ಅಪಾರ್ಟ್ಮೆಂಟ್ ಗೆ ವಾಪಸ್ ಬಂದ ನಿವಾಸಿಗಳು