Select Your Language

Notifications

webdunia
webdunia
webdunia
webdunia

ಬೆಂಗಳೂರಿನಲ್ಲಿ ರಸ್ತೆ ಗುಂಡಿಗೆ ಇನ್ನೆಷ್ಟು ಬಲಿ ಬೇಕು?

ಬೆಂಗಳೂರಿನಲ್ಲಿ ರಸ್ತೆ ಗುಂಡಿಗೆ ಇನ್ನೆಷ್ಟು ಬಲಿ ಬೇಕು?
bangalore , ಭಾನುವಾರ, 11 ಸೆಪ್ಟಂಬರ್ 2022 (19:55 IST)
ಕಳೆದೈದು ವರುಷದಲ್ಲಿ ರಸ್ತೆಗುಂಡಿಯಿಂದ 15 ಜನರ ಸಾವು ಸಂಭವಿಸಿದೆ.ಕಳೆದೈದು ವರುಷಕ್ಕೆ ಹೋಲಿಸಿದಲ್ಲಿ  ಈ ವರುಷವೇ ಅತಿ ಹೆಚ್ಚು ಗುಂಡಿಗೆ ವಾಹನಸವಾರರು ಬಲಿಯಾಗಿದ್ದಾರೆ.
 
ಐದು ವರುಷದಲ್ಲಿ ಈ ವರುಷವೇ ಎಂಟು ಸಾವು ಇದರಲ್ಲಿ ನಾಲ್ವರು ಮಹಿಳೆಯರು, 11 ಗಂಡಸರು ಸಾವನಪ್ಪಿದ್ದಾರೆ.ಇದರಲ್ಲಿ 19-40 ವಯೋಮಿತಿಯವರು ಸಾವನ್ನಪ್ಪಿರುವುದು ಹೆಚ್ಚು.ವೈಟ್ ಫೀಲ್ಡ್ ಹಾಗೂ ಯಲಹಂಕದಲ್ಲಿ ತಲಾ‌ ಮೂರು ಸಾವು ಬೆಂಗಳೂರಿನ ಆರ್ ಟಿ ನಗರ, ಪೀಣ್ಯ , ಕಾಮಾಕ್ಷಿಪಾಳ್ಯ, ಪುಲಕೇಶಿನಗರ, ಬಾಣಸವಾಡಿ, ಯಶವಂತಪುರ, ಚಿಕ್ಕಪೇಟೆ, ಹೇರೋಹಳ್ಳಿ ಸೇರಿದಂತೆ‌ ಹಲವೆಡೆ ಸಾವು ಸಂಭವಿಸಿದೆ.
 
ಕಳೆದೈದು ವರುಷದಲ್ಲಿ ಬರೋಬ್ಬರಿ 210 ಕೋಟಿ ರಸ್ತೆ ಗುಂಡಿ ತೇಪೆ ಹಚ್ಚಲು ಖರ್ಚುಮಾಡಿದ್ದಾರೆ.2019-20ರಲ್ಲಿ 54.8 ಕೋಟಿ ಅತಿ ಹೆಚ್ಚು ಖರ್ಚಾಗಿದ್ದು,2020-21ರಲ್ಲಿ 16.4 ಕೋಟಿ ಅತಿ ಕಡಿಮೆ ಖರ್ಚಾಗಿದೆ.2021-22ರಲ್ಲಿ 47 ಕೋಟಿ ಖರ್ಚು ಮಾಡಿದಾರೆ.
 
ಇನ್ನು ಕಳೆದೈದು ವರುಷದಲ್ಲಿ ಬಿಬಿಎಂಪಿ ರಸ್ತೆ ಗುಂಡಿ  ಎಷ್ಟು ಕೋಟಿ ಖರ್ಚು ಮಾಡಿದೆ ಗೊತ್ತೆ?
 
-2017-18ರಲ್ಲಿ 47.8 ಕೋಟಿ ವ್ಯಯ
-2018-19ರಲ್ಲಿ 49.2 ಕೋಟಿ ವ್ಯಯ
-2019-20ರಲ್ಲಿ 54.8 ಕೋಟಿ ವ್ಯಯ
-2020-21ರಲ್ಲಿ 16.4 ಕೋಟಿ ವ್ಯಯ
-2021-22ರಲ್ಲಿ 47 ಕೋಟಿ ವ್ಯಯ
 

Share this Story:

Follow Webdunia kannada

ಮುಂದಿನ ಸುದ್ದಿ

ವಿಶ್ವ ವಿದ್ಯಾಲಯದ ಜಾಗದ ಮೇಲೆ ಕಣ್ಣಿಕ್ಕಿದ ಬಿಬಿಎಂಪಿ..!