Publish Date: Tue, 20 Aug 2019 (19:23 IST)
Updated Date: Tue, 20 Aug 2019 (19:25 IST)
ರಾಜ್ಯದಲ್ಲಿ ಉಂಟಾಗಿರೋ ಪ್ರವಾಹ ಪರಿಸ್ಥಿತಿ ಕೊಂಚ ಇಳಿಮುಖ ಕಾಣುತ್ತಿರೋವಾಗಲೇ ಕೇಂದ್ರ ಸರಕಾರ ಬರ ಪರಿಹಾರ ಹಣ ಬಿಡುಗಡೆಗೊಳಿಸಿದೆ.
ಕರ್ನಾಟಕ, ಓಡಿಸ್ಸಾ ಮತ್ತು ಹಿಮಾಚಲ ಪ್ರದೇಶಗಳಿಗೆ ಕೇಂದ್ರ ಸರ್ಕಾರವು ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ ವತಿಯಿಂದ ಪರಿಹಾರ ಹಣ ಬಿಡುಗಡೆಗೊಳಿಸಿದೆ.
ಇದರಲ್ಲಿ ಕರ್ನಾಟಕ ರಾಜ್ಯಕ್ಕೆ 1,029.39 ಕೋಟಿ ಹಣ ಬರ ಪರಿಹಾರಕ್ಕಾಗಿ ಬಂದಂತಾಗಿದೆ.
ಹಿಮಾಚಲ ಪ್ರದೇಶಕ್ಕೆ 64.49 ಕೋಟಿ ಹಾಗೂ ಓಡಿಸ್ಸಾಕ್ಕೆ 3,338.22 ಕೋಟಿ ಪರಿಹಾರವನ್ನು ಕೇಂದ್ರ ನೀಡಿದೆ.