Publish Date: Sun, 18 Aug 2019 (21:35 IST)
Updated Date: Sun, 18 Aug 2019 (21:37 IST)
ರಾಜ್ಯದ ಗಡಿ ಜಿಲ್ಲೆಗೆ ಹಾಗೂ ಪ್ರವಾಹ ಪೀಡಿತ ಪ್ರದೇಶಗಳಿಗೆ ಜನರು ನೆರವಾಗುತ್ತಿದ್ದಾರೆ.
ಮೈಕೋ ಕನ್ನಡ ಬಳಗ ಬಿಡದಿ ಘಟಕದ ವತಿಯಿಂದ ನೆರೆ ಸಂತ್ರಸ್ತರಿಗೆ ಪರಿಹಾರ ಸಾಮಗ್ರಿ ವಿತರಣೆ ಮಾಡಲಾಗಿದೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಶಿನಾಳ ಗ್ರಾಮದಲ್ಲಿ ವಿತರಣೆ ಮಾಡಲಾಗಿದೆ.
ಬೆಂಗಳೂರಿನಿಂದ ಅಥಣಿ ತಲುಪಿದ ಐದಕ್ಕು ಹೆಚ್ಚು ಜನರ ತಂಡದ ಸದಸ್ಯರು, ನೆರೆ ಪೀಡಿತರಿಗೆ ಪರಿಹಾರ ಸಾಮಗ್ರಿ ವಿತರಣೆ ಮಾಡಿದ್ರು.
2005 ರಲ್ಲಿ ಪ್ರವಾಹ ಬಂದಾಗ ಬಾಗಲಕೋಟೆ ಜಿಲ್ಲೆಯಲ್ಲಿ ನೂರಕ್ಕೂ ಹೆಚ್ಚು ಮನೆಗಳನ್ನು ಕಟ್ಟಿಸಿಕೊಟ್ಟಿದ್ದಾರೆ ಮೈಕೋ ಕನ್ನಡ ಬಳಗದವರು.
ಈ ಬಾರಿ ಮನೆಗಳ ನಿರ್ಮಾಣಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಗೆ ಹಣ ಸಂದಾಯದ ಜೊತೆಗೆ ಸಂತ್ರಸ್ತರಿಗೆ ಅಗತ್ಯ ವಸ್ತುಗಳ ಪೂರೈಕೆ ಮಾಡೋದಾಗಿ ಹೇಳಿದ್ದಾರೆ.