Daily Horoscope

Select Your Language

Notifications

webdunia
webdunia
webdunia
webdunia

ಮೃತ ರೈತ ಸುರೇಶ್ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ವಿತರಣೆ ಮಾಡಿದ ಸಿಎಂ

ಮಂಡ್ಯ
ಮಂಡ್ಯ : ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದ ಕೆಆರ್ ಪೇಟೆ ತಾಲೂಕು ಅಘಲಯ ಗ್ರಾಮದ ರೈತ ಸುರೇಶ್ ಅವರ  ನಿವಾಸಕ್ಕೆ ಇಂದು ಭೇಟಿ ನೀಡಿದ ಸಿಎಂ ಕುಮಾರಸ್ವಾಮಿ ಆತನ ಕುಟುಂಬದವರಿಗೆ ಸಾಂತ್ವಾನ ಹೇಳಿ 5 ಲಕ್ಷ ರೂ. ಪರಿಹಾರ ವಿತರಣೆ ಮಾಡಿದ್ದಾರೆ.


 



ಸಾಲಭಾದೆಯಿಂದ ರೈತ ಸುರೇಶ್ ವಿಡಿಯೋದ ಮೂಲಕ ಕೆರೆಗಳನ್ನು ತುಂಬಿಸಿ ರೈತರ ಕಷ್ಟ ಬಗೆಹರಿಸುವಂತೆ ಹಾಗೂ ತಮ್ಮ ಅಂತ್ಯ ಸಂಸ್ಕಾರಕ್ಕೆ ಬರುವಂತೆ ಸಿಎಂಗೆ ಮನವಿ ಮಾಡಿ ನೇಣಿಗೆ ಶರಣಾಗಿದ್ದರು.


ಈ ಹಿನ್ನಲೆಯಲ್ಲಿ ಇಂದು ಸುರೇಶ್ ಮನೆಗೆ ಭೇಟಿ ನೀಡಿದ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮೃತ ರೈತ ಸುರೇಶ್ ಪುತ್ರ ಚಂದ್ರು ಅವರಿಗೆ ಕೂಡಲೇ ಸೂಕ್ತ ಸರ್ಕಾರಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿದ್ದಾರೆ. ಹಾಗೇ ರೈತ ಸುರೇಶ್ ಪುತ್ರಿ ಸುವರ್ಣಗೆ ಎಂ.ಕಾಂ ಶಿಕ್ಷಣ ಮುಂದುವರೆಸಲು ನೆರವು ನೀಡುವುದಾಗಿ ತಿಳಿಸಿದ್ದಾರೆ. ಹಾಗೇ  ಸಂತೆಬಾಚಳ್ಳಿ ಹೋಬಳಿಯ ಕೆರೆಗಳಿಗೆ ನೀರು ತುಂಬಿಸುವ ವಿಚಾರವಾಗಿ ಸ್ಥಳೀಯ ರೈತರು ಹಾಗೂ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಸಚಿವ ಸ್ಥಾನ ಸ್ವೀಕರಿಸಿ 4 ದಿಗಳಾದರೂ ಪಕ್ಷೇತರ ಶಾಸಕರಿಗಿಲ್ಲ ಖಾತೆ