Publish Date: Thu, 15 Aug 2019 (14:50 IST)
Updated Date: Thu, 15 Aug 2019 (14:52 IST)
ಭೀಕರ ಪ್ರವಾಹದಿಂದಾಗಿ ಮನೆ, ಮಠಗಳನ್ನಕಳೆದುಕೊಂಡು ಜೀವನ ಬೀದಿಗೆ ಬಿದ್ದಿದ್ದರೂ ಈ ಮಂದಿ ಮಾತ್ರ ದೇಶ ಪ್ರೇಮ ಮೆರೆದು ಮಾದರಿಯಾಗಿದ್ದಾರೆ.
ಇಡೀ ಗ್ರಾಮ ಜಲಾವೃತವಾಗಿದೆ. ಆದರೂ ಅಲ್ಲಿನ ನೆರೆ ಪೀಡಿತರು ತೆಪ್ಪವನ್ನ ಬಳಸಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ರಾಷ್ಟ್ರಕ್ಕೆ ಗೌರವ ಸಮರ್ಪಣೆ ಮಾಡಿದ್ದಾರೆ.
ಬಾಗಲಕೋಟೆಯ ಜಮಖಂಡಿ ತಾಲೂಕಿನ ಶೂರ್ಪಾಲಿ ಗ್ರಾಮದ ಜನರೇ ವಿಭಿನ್ನವಾಗಿ ದೇಶಭಕ್ತಿ ಸಾರಿ ಗಮನ ಸೆಳೆದಿದ್ದಾರೆ.
ಪ್ರಾಥಮಿಕ ಶಾಲೆ, ಪಂಚಾಯಿತಿ ಕಟ್ಟೆ ಹೀಗೆ ವಿವಿಧೆಡೆ ತೆಪ್ಪದಲ್ಲೇ ಸಾಗಿ ಧ್ವಜಾರೋಹಣ ನೆರವೇರಿಸಿ ಸಂಭ್ರಮ ಪಟ್ಟಿದ್ದಾರೆ.