ಪ್ರೇಯಸಿ ಮೇಲಿನ ಅನುಮಾನಕ್ಕೆ ಯುವತಿಯರಿಬ್ಬರ ಕೊಲೆ

ಭಾನುವಾರ, 18 ಆಗಸ್ಟ್ 2019 (21:57 IST)
ಪ್ರಿಯತಮೆಯೊಬ್ಬಳು ಬೇರೊಬ್ಬನೊಂದಿಗೆ ಚಾಟ್ ಮಾಡುತ್ತಿದ್ದಾಳೆ ಎಂದು ಅನುಮಾನಿಸಿದ ಭೂಪನೊಬ್ಬ ಯುವತಿಯರಿಬ್ಬರನ್ನು ಕೊಲೆ ಮಾಡಿರೋ ಘಟನೆ ನಡೆದಿದೆ.

ಪ್ರೇಯಸಿಯ ಮನೆಗೆ ನುಗ್ಗಿದ ಯುವಕ ತನ್ನ  ಪ್ರಿಯತಮೆಯ ಫೋನ್ ಚೆಕ್ ಮಾಡಿದ್ದಾನೆ. ಈ ವೇಳೆ ನಡೆದ ಗಲಾಟೆಯಲ್ಲಿ ರೋಸಿಹೋದ ಯುವಕ ತನ್ನ ಪ್ರೇಯಸಿ ಹಾಗೂ ಆಕೆಯ ಸಹೋದರಿಯನ್ನು ಕೊಲೆ ಮಾಡಿದ್ದಾನೆ.

ಚಂಡೀಗಢದಲ್ಲಿ ಘಟನೆ ನಡೆದಿದ್ದು, ಕುಲ್ದೀಪ್ ಸಿಂಗ್ ಎಂಬುವನೇ ಆರೋಪಿಯಾಗಿದ್ದಾನೆ.
ಕುಲ್ದೀಪ್ ಸಿಂಗ್ ಪ್ರೀತಿ ಮಾಡುತ್ತಿದ್ದ ಯುವತಿಯ ಜೊತೆಗೆ ಮದುವೆ ಮಾಡಲು ನಿಶ್ಚಿರಾರ್ಥಕ್ಕೆ ಸಿದ್ಧತೆ ನಡೆದಿತ್ತು ಎನ್ನಲಾಗಿದೆ.

ತಾನು ಮದುವೆಯಾಗಬೇಕೆಂದಿರೋ ಹುಡುಗಿ ಬೇರೊಬ್ಬನೊಂದಿಗೆ ಚಾಟ್ ಮಾಡುತ್ತಿದ್ದಾಳೆ ಅಂತ ಶಂಕೆ ವ್ಯಕ್ತಪಡಿಸಿದ ಭೂಪ ಡಬಲ್ ಮರ್ಡರ್ ಮಾಡಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.


ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ನರೇಂದ್ರ ಮೋದಿ ಭಾಷಣಕ್ಕೆ ಕಾಂಗ್ರೆಸ್ ಸಂಸದ ಫಿದಾ