Select Your Language

Notifications

webdunia
webdunia
webdunia
webdunia

ಲಾಲ್ ಬಾಗ್ನಲ್ಲಿ ಮಾವು, ಹಲಸಿನ ಮೇಳಗೆ ಚಾಲನೆ

Drive to mango
bangalore , ಶುಕ್ರವಾರ, 26 ಮೇ 2023 (17:56 IST)
ಹಣ್ಣುಗಳ ರಾಜ ಮಾವು ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದ್ದು, ಎಲ್ಲೆಲ್ಲೂ ಈಗ ಮಾವಿನ ಹಣ್ಣುಗಳದ್ದೇ ಕಾರು ಬಾರು. ರಾಜ್ಯದ ವಿವಿಧ ಭಾಗಗಳಿಂದ ಬೆಂಗಳೂರಿಗೆ ವೆರೈಟಿ ಹಣ್ಣುಗಳು ಬರುತ್ತಿದ್ದು, ಬಾಯಲ್ಲಿ ನೀರೂರಿಸುವಂತಿವೆ. ರಾಜ್ಯದಲ್ಲಿ ಅಕಾಲಿಕ ಮಳೆ ಹಾಗೂ ಬಿಸಿಗಾಳಿಯಿಂದ ಮಾವಿನ ಇಳುವರಿ ಮೇಲೆ ಭಾರಿ ಪರಿಣಾಮ ಬೀರಿದೆ ಎಂಬ ಆತಂಕದ ನಡುವೆಯೇ ಬೆಂಗಳೂರಿನಲ್ಲಿ ಇಂದಿನಿಂದ 10 ದಿನಗಳ ಮಾವು ಮತ್ತು ಹಲಸು ಮೇಳ ಆರಂಭವಾಗಿದೆ.

ಬಾದಾಮಿ, ಮಲ್ಲಿಕಾ, ರಸಪುರಿ, ಬೈಗಂಪಲ್ಲಿ, ಸೇಂದೂರ, ತೋತಾಪುರಿ, ದಶಹರಿ, ಮಲಗೋವಾ, ಹಿಮಾಮ್ ಪಸಂದ್, ಕಾಲಾಪಾಡ್, ಕೇಸರ್ ಸೇರಿ ಬಗೆ ಬಗೆಯ ಮಾವುಗಳು.. ಮತ್ತೊಂದೆಡೆ ಚಂದ್ರ ಹಲಸು, ಗಮ್ಲೆಸ್, ರುದ್ರಾಕ್ಷಿ ಹಲಸು, ಸ್ಥಳೀಯ ಹಲಸುಗಳು ಸೇರಿ 6ಕ್ಕೂ ಹೆಚ್ಚಿನ ತಳಿಯ ರಾಶಿರಾಶಿ ಹಲಸಿನ ಹಣ್ಣು.ಇದು ಲಾಲ್ಬಾಗ್ನ ಹಾಪ್ಕಾಮ್ಸ್ನಲ್ಲಿ ಕಂಡು ಬಂದ ದೃಶ್ಯ.ರೈತರಿಂದ ನೇರವಾಗಿ ಗ್ರಾಹಕರಿಗೆ ತಲುಪಿಸಲು ಹಾಪ್ಕಾಮ್ಸ್ ಈ ವರ್ಷ ಮಾವು ಮತ್ತು ಹಲಸಿನ ಮಾರಾಟ ಮೇಳ ಆರಂಭಿಸಿದೆ. ಹಾಪ್ ಕಾಮ್ಸ್ ನಲ್ಲಿ ಇಂದಿನಿಂದ ನಡೆಯುವ ಮಾವು ಮತ್ತು ಹಲಸು ಮೇಳವನ್ನ ಆಯೋಜಿಸಲಾಗಿದ್ದು, ಸಚಿವ ರಾಮಲಿಂಗಾರೆಡ್ಡಿ, ಹಾಗೂ ಶಾಸಕ ಉದಯ್ ಗರುಡಾಚಾರ್ ಉದ್ಘಾಟಿಸಿದರು.

ಹಾಪ್ಕಾಮ್ಸ್ನಲ್ಲಿ ಲಭ್ಯವಿರುವ ಮಾವಿನ ಹಣ್ಣುಗಳ ದರ
 
ರಸಪುರಿ: 125 ರೂಪಾಯಿ
ತೋತಾಪುರಿ: 35 ರೂಪಾಯಿ
ಬಹಾದಾಮಿ: 148 ರೂಪಾಯಿ
ಅಲ್ಪೋನ್ಸೋ: 155 ರೂಪಾಯಿ
ಮಲ್ಲಿಕಾ: 120 ರೂಪಾಯಿ
ಇಮಾಮ್ ಪಸಂದ್:165 ರೂಪಾಯಿ
ಸೇಂದೂರ: 58 ರೂಪಾಯಿ
ಮಲ್ಗೋವಾ: 160 ರೂಪಾಯಿ
ಬಂಗನಪಲ್ಲಿ: 58 ರೂಪಾಯಿ
ಬೆಂಗಳೂರಿನ ಹಾಪ್ಕಾಮ್ಸ್ ಅಧ್ಯಕ್ಷ ಎನ್ ದೇವರಾಜ್ ಮಾತನಾಡಿ, ಈ ಋತುವಿನ ಇಳುವರಿಯು ಈಗ ಹೆಚ್ಚಿನ ತಳಿಗಳ ಹಣ್ಣುಗಳು ಮಾರುಕಟ್ಟೆಗೆ ಬರುವುದರೊಂದಿಗೆ ಸ್ಥಿರವಾಗುತ್ತಿದ್ದರೂ, ಬೇಡಿಕೆಯನ್ನು ಪೂರೈಸಲು ಇನ್ನೂ ಸಾಕಾಗುವುದಿಲ್ಲ ಅಂತ ಹೇಳಿದ್ದಾರೆ.ಒಟ್ಟಾರೆ, ಇಂದಿನಿಂದ ಜೂ.5ರವರೆಗೆ ಲಾಲ್ಬಾಗ್ನಲ್ಲಿ ಮಾವು, ಹಲಸಿನ ಮೇಳ ನಡೆಯಲಿದ್ದು, ವಿವಿಧ ಜಿಲ್ಲೆಗಳಿಂದ ರೈತರು ಆಗಮಿಸಿದ್ದಾರೆ. ಇನ್ನು ಈ ಮೇಳದಲ್ಲಿ ತೋಟಗಾರಿಕೆ ಇಲಾಖೆ 10% ರಿಯಾಯಿತಿ ದರ ನಿಗದಿ ಮಾಡಿದೆ. ಒಂದು ಕಡೆ ಬಗೆ ಬಗೆಯ ಮಾವು. ಮತ್ತೊಂದು ಕಡೆ ಹಲಸಿನ ಹಣ್ಣು. ರೈತರಿಂದ ನೇರವಾಗಿ ಗ್ರಾಹಕರ ಕೈಗೆ ತಲುಪಿಸಲು ಮಾವು ಹಲಸಿನ ಮೇಳಕ್ಕೆ ತೋಟಾಗಾರಿಕೆ ಇಲಾಖೆ ಇಂದು ಚಾಲನೆ ನೀಡಿದೆ. ವಿವಿಧ ರೀತಿಯ ಮಾವಿನ ಹಣ್ಣು ಹಾಗೂ ಹಲಸಿನ ಹಣ್ಣು ಕೊಳ್ಳಲು ಜನರು ಮುಗಿ ಬೀಳುತ್ತಿದ್ದಾರೆ. ಇಂದಿನಿಂದ 19 ದಿನಗಳ ಕಾಲ ಈ ಮೇಳ ನಡೆಯಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

RSS ಬ್ಯಾನ್ ಮಾಡುವ ಶಕ್ತಿ ಯಾರಿಗೂ ಇಲ್ಲ- ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ