Select Your Language

Notifications

webdunia
webdunia
webdunia
webdunia

ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ಗೆ ಹೆಚ್ಚಿದ ಬೇಡಿಕೆ

Increased demand for BPL card in the state
bangalore , ಶುಕ್ರವಾರ, 26 ಮೇ 2023 (16:36 IST)
ಕಾಂಗ್ರೆಸ್ ಸರ್ಕಾರ ಬರುತ್ತಿದ್ದಂತೆ ಬಿ ಪಿ ಎಲ್ ಕಾರ್ಡ್ ಗೆ  ಬೇಡಿಕೆ ಹೆಚ್ಚಾಗಿದೆ.ರಾಜ್ಯದಲ್ಲಿ ಪ್ರತಿದಿನ 500ಕ್ಕೂ ಹೆಚ್ಚು ಜನರಿಂದ ಅರ್ಜಿ ಸಲ್ಲಿಕೆ ಕುರಿತು ವಿಚಾರಣೆ  ನಡೆಯುತ್ತಿದೆ.ಸಿದ್ದರಾಮಯ್ಯ ಸರ್ಕಾರದ ಹಲವು ಭಾಗ್ಯ, ಗ್ಯಾರಂಟಿ ಘೋಷಣೆ ಹಿನ್ನೆಲೆ ಬಿಪಿಎಲ್ ಕಾರ್ಡ್ ಹೊಂದಿರಬೇಕು ಎಂಬ ಮಾನದಂಡ‌ ಕಾರಣದಿಂದ ಇದೀಗ ಸರ್ಕಾರದ ಉಚಿತ ಸ್ಕೀಂ ಪಡೆಯಲು ಮಧ್ಯಮ ವರ್ಗದ ಜನತೆ ಬಡ ಜನತೆ ಮುಗ್ಗಿ ಬಿದ್ದಿದೆ.ಕಳೆದೆರಡು ವರುಷದಿಂದ ಇಲ್ಲಿಯವರೆಗೆ 2.87 ಲಕ್ಷ ಬಿಪಿಎಲ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಕೆ ಮಾಡಲಾಗಿತ್ತು.46,576 ಎಪಿಎಲ್ ಕಾರ್ಡ್ ಅರ್ಜಿ ಸಲ್ಲಿಕೆಯಾಗಿದ್ದು,ಒಟ್ಟು 3.36 ಲಕ್ಷ BPL, APL ಕಾರ್ಡ್ ಅರ್ಜಿ ಸಲ್ಲಿಕೆಯಗಿದ್ದು,ಇಲ್ಲಿಯವರೆಗೆ 4 ಕೋಟಿ ಜನರಿಗೆ ಬಿಪಿಎಲ್ ಹಾಗೂ ಎಪಿಎಲ್ ಕಾರ್ಡ್ ಹಂಚಿಕೆಯಾಗಿದೆ.
 
BPL ಕಾರ್ಡ್ ಗೆ ಡಿಮ್ಯಾಂಡ್ ಹೆಚ್ಚಾದ ಹಿನ್ನಲೆ ಇನ್ಮುಂದೆ BPL ಕಾರ್ಡ್ ನೀಡಲು ಹಣಕಾಸು ಇಲಾಖೆ ಅನುಮತಿ ಅಗತ್ಯ ಇದೆ.ರಾಷ್ಟ್ರೀಯ ಆಹಾರ ಹಕ್ಕು ಕಾಯಿದೆ ಮಿತಿ ತಲುಪಿರುವ ಕರ್ನಾಟಕ‌ ರಾಜ್ಯ ಕಳೆದ ಮೂರು ತಿಂಗಳ ಹಿಂದೆ‌ 1.5 ಲಕ್ಷ ಬಿಪಿಎಲ್ ಕಾರ್ಡ್ ಅನುಮತಿ ನೀಡಿದೆ.ಇನ್ನು ಬಾಕಿ ಉಳಿದ ಎರಡು ಲಕ್ಷ ಅರ್ಜಿಗೆ ರಾಜ್ಯ ಸರ್ಕಾರದ ಅನುಮತಿ ಪಡೆಯಬೇಕು.ಅನಾರೋಗ್ಯದಂಥ ಎಮರ್ಜೆನ್ಸಿ ಇದ್ರೆ ಬಿಪಿಎಲ್ ಕಾರ್ಡ್ ವಿತರಣೆ ಮಾಡಲಾಗುತ್ತಿದೆ.ಮತ್ತೊಂದು ಕಡೆ ಸರ್ಕಾರ ಘೋಷಣೆ ‌ಮಾಡಿರುವ ಉಚಿತ ಅಕ್ಕಿ ವಿತರಣೆ ಸ್ಕೀಂಗೆ ಮುಂದಿನ ತಿಂಗಳು ಎರಡನೇ ತಾರೀಖಿನವರೆಗೂ ಕಾರ್ಡ್ ನೀಡದಿರಲು ನಿರ್ಧಾರ ಮಾಡಲಾಗಿದೆ.ನಮಗೆ ಬಿಪಿಎಲ್ ಕಾರ್ಡ್ ಮಾಡಿಸಿಕೊಡಿ ಎಂದು ಅಧಿಕಾರಿಗಳಿಗೆ ಜನರು ಮನವಿಗಳ ಸುರಿಮಾಲೆಯೇ ಮಾಡ್ತಿದ್ದಾರೆ.
 
ಯಾವ ಯಾವ ಜಿಲ್ಲೆಯಲ್ಲಿ ಅತಿ ಹೆಚ್ಚು ಬಿಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದ್ದಾರೆ
 
ಟಾಪ್ 5 ಬಿಪಿಎಲ್‌ ಕಾರ್ಡ್ ಅರ್ಜಿ ಸಲ್ಲಿಕೆಯಾದ ಜಿಲ್ಲೆಗಳು
ಬೆಳಗಾವಿ 27,411
ವಿಜಯಪುರ 17,228
ಬೆಂಗಳೂರು 12,765
ಬೀದರ್ 12,661
ರಾಯಚೂರು 12,498
 

Share this Story:

Follow Webdunia kannada

ಮುಂದಿನ ಸುದ್ದಿ

ದ್ವೇಷದ ರಾಜಕಾರಣ ಮಾಡಲು ಪ್ರಾರಂಭಿಸಿದ್ದಾರೆ-ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ