Select Your Language

Notifications

webdunia
webdunia
webdunia
webdunia

ಬಿಜೆಪಿಗೆ ಬಡವರ ಬಗ್ಗೆ ಕಾಳಜಿ ಇಲ್ಲ - ರಾಮಲಿಂಗಾರೆಡ್ಡಿ

BJP does not care about the poor
bangalore , ಶುಕ್ರವಾರ, 26 ಮೇ 2023 (15:44 IST)
ರಾಜ್ಯದಲ್ಲಿ‌ ಮತ್ತೆ ಇಂದಿರಾ ಕ್ಯಾಂಟೀನ್ ಯೋಜನೆ ಪುನರಾರಂಭವಾಗಿದೆ.ಇಂದಿರಾ ಕ್ಯಾಂಟೀನ್ ಆರಂಭ ಹಿನ್ನಲೆ  ಕಾರ್ಯ ನಿರ್ವಹಣೆ ಹಾಗೂ ಆಹಾರ ವ್ಯವಸ್ಥೆ ಬಗ್ಗೆ  ಇಂದಿರಾ ಕ್ಯಾಂಟಿನ್ ನಲ್ಲಿ ಪರಿಶೀಲನೆಯನ್ನ ಸಚಿವ ರಾಮಲಿಂಗ ರೆಡ್ಡಿಯವರು ನಡೆಸಿದ್ದಾರೆ.ಬನ್ನಪ್ಪ ಪಾರ್ಕ್ ಹಡ್ಸನ್ ವೃತ್ತದ ಬಳಿಯ ಇಂದಿರಾ ಕ್ಯಾಂಟೀನ್ ಗೆ ಭೇಟಿ ನೀಡಿ ರಾಮಲಿಂಗ ರೆಡ್ಡಿ ಪರಿಶೀಲಿಸಿದ್ದಾರೆ.
 
ಈ ವೇಳೆ ಮಾತನಾಡಿದ ರಾಮಲಿಂಗ ರೆಡ್ಡಿ ಇಂದಿರಾ ಕ್ಯಾಂಟೀನ್ ಆರಂಭ ಮಾಡಿದ್ದೆ ಕಾಂಗ್ರೆಸ್ ಸರ್ಕಾರ .ಪ್ರತಿ ವಿಧಾನಸಭಾ ಕ್ಷೇತ್ರ ಹಾಗೂ ಆಸ್ಪತ್ರೆಯಲ್ಲಿ ಕ್ಯಾಂಟೀನ್ ಆರಂಭವಾಗಲಿದೆ.ಬಿಜೆಪಿ ಸರ್ಕಾರ ಬಂದ ನಂತರ ಹಣ ನೀಡದೇ ಮುಚ್ಚಿ ಹೋಗಿತ್ತು.ಪ್ಲಾನ್ ಮಾಡಿ ಕ್ಯಾಂಟೀನ್ ಕ್ಲೋಸ್ ಮಾಡಿದ್ರು.ಈ ಸಂಬಂಧ ನಾವು ಹೋರಾಟ ಕೂಡ ಮಾಡಿದ್ದೆವೆ.ಹಿಂದಿನ ಸರ್ಕಾರದ ನಿರ್ಲಕ್ಷ್ಯ ದಿಂದ ಮುಚ್ಚಿ ಹೋಗಿತ್ತು .ಬೆಂಗಳೂರಿಗೆ ಬೇರೆ ಬೇರೆ ಊರಿಂದ ಜನರು ಬರ್ತಾರೆ .ಬೆಂಗಳೂರಿಗರಿಗೆ ಹಾಗೂ ಬೀದಿ ಬದಿ ವ್ಯಾಪಾರಿಗಳಿಗೆ ಅನುಕೂಲ ಆಗಲಿ ಅಂತಾ ಮಾಡಿದ್ವಿ .ಐದು ರೂಪಾಯಿ ಗೆ ತಿಂಡಿ, ಹತ್ತು ರೂಪಾಯಿಗೆ ಊಟ ನೀಡಲಾಗುತ್ತಿದೆ .ನೀರಿನ ಸಮಸ್ಯೆ ಇತ್ತು ಈಗ ಅದನ್ನ ಬಗೆಹರಿಸಲು ಅಧಿಕಾರಿಗಳಿಗೆ ಸೂಚನೆ  ನೀಡಲಾಗಿದೆ.ಸರ್ಕಾರ ಮುಂದೆ ಇಂದಿರಾ ಕ್ಯಾಂಟೀನ್ ನಿರ್ವಹಣೆಗೆ ಅಧಿಕಾರಿಯನ್ನ ನೇಮಕ ಮಾಡಿದ್ರೆ ಒಳ್ಳೆಯದು.ಸ್ವಚ್ಚತೆ ಕಾಪಾಡಲು, ಊಟ ನಿರ್ವಹಣೆ, ಟೋಕನ್ನ ಎಲ್ಲವನ್ನೂ ನಿರ್ವಹಣೆಗೆ ಅಧಿಕಾರಿಯ ನೇಮಕವಾದ್ರೆ ಉತ್ತಮ‌ಕ್ವಾಲಿಟಿ , ಕ್ವಾಂಟಿಟಿ ಚೆನ್ನಾಗಿ ಮಾಡುತ್ತೆವೆ ಎಂದು ರಾಮಲಿಂಗ ರೆಡ್ಡಿ ಹೇಳಿದ್ರು.
 
ಗ್ಯಾರಂಟಿ ಗಲಾಟೆ ವಿಚಾರವಾಗಿಯೂ ರಾಮಲಿಂಗಾರೆಡ್ಡಿ ಪ್ರತಿಕ್ರಿಯಿಸಿದ್ದು,ಬಿಜೆಪಿಯವರು ಸುಮ್ಮನೆ ಮಾತಾಡ್ತಾರೆ  ಮಾತಿಗೆ ಕಿಮ್ಮತ್ತಿಲ್ಲ .ಅವರು ನುಡಿದಂತೆ ನಡೆಯುವ ಪಕ್ಷ ಅಲ್ಲ .ನಮ್ಮ ಗ್ಯಾರಂಟಿಗಳೆಲ್ಲಾ ಜಾರಿ ಯಾಗುತ್ತವೆ .135 ಸ್ಥಾನ ಕಾಂಗ್ರೆಸ್ ಪಡೆದಿರುವುದು ಬಿಜೆಪಿಗೆ ಸಹಿಸಲು ಆಗ್ತಾಯಿಲ್ಲ.ನಾವು 7 ಕೆಜಿ ಅಕ್ಕಿ ನೀಡುತ್ತಿದ್ದೆವು ಅದನ್ನ ಅವರು 3 ಕೆಜಿಗೆ ಇಳಿಸಿದ್ದಾರೆ .ಬಿಜೆಪಿಗೆ ಬಡವರ ಬಗ್ಗೆ ಕಾಳಜಿ ಇಲ್ಲ .ಈಗ 10 ಕೆಜಿ ನೀಡುತ್ತೆವೆ.ಅಕೌಂಟ್ ದುಡ್ಡು ಹಾಕಲು ಅವರ ಅಕೌಂಟ್ ನಂಬರ್ ಬೇಕು, ಖಾತೆ ಇಲ್ಲದವರು ಖಾಲೆ ಓಪನ್ ಮಾಡಬೇಕು .ಇದಕ್ಕೆಲ್ಲ ಸಮಯ ಬೇಕಾಗುತ್ತದೆ .ಪ್ರತಾಪ್ ಸಿಂಹ / ಪೇಪರ್ ಸಿಂಹ 
ಹಾಗೂ ಸಿಟಿ ರವಿ ಎಲ್ಲಿರಬೇಕು ಅಲ್ಲಿರಬೇಕು .ನಮ್ಮ ಸರ್ಕಾರ ಬಂದು ಕೆಲವೇ ದಿನ ಆಗಿದೆ ಈಗಲೆ ಬೊಬ್ಬೆ ಹೊಡಿಯುತ್ತಿದ್ದಾರೆ .ಮುಂದಿನ ಕ್ಯಾಪಿನೆಟ್ ನಲ್ಲಿ ಎಲ್ಲವೂ ನಿರ್ಧಾರ ಆಗಲಿದೆ.ಅಲ್ಲಿಯವರೆಗೂ ಬಿಜೆಪಿ ತಾವು ಯಾಕೆ ಸೋತಿದ್ದು ಅಂತಾ ಯೋಜನೆ ಮಾಡಲಿ ಎಂದು ಬಿಜೆಪಿ ಗೆ ರಾಮಲಿಂಗಾರೆಡ್ಡಿ ಟಾಂಗ್ ನೀಡಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ಮಡಿವಾಳ ಕೆರೆಗೆ ಹರಿದು ಬಂದ ಕೊಳಚೆ ನೀರು