Select Your Language

Notifications

webdunia
webdunia
webdunia
Thursday, 3 April 2025
webdunia

ಎಸ್ ಬಿಐ ಎಟಿಎಂ ವಿತ್ ಡ್ರಾ ಶುಲ್ಕ ಹೆಚ್ಚಳ!

ಎಸ್ ಬಿಐ
bangalore , ಶನಿವಾರ, 18 ಜೂನ್ 2022 (19:45 IST)
ದೇಶದ ಅತೀ ದೊಡ್ಡ ರಾಷ್ಟ್ರೀಯ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂಗಳಲ್ಲಿ ಹಣ ವಿತ್ ಡ್ರಾ ಶುಲ್ಕದಲ್ಲಿ ಬದಲಾವಣೆ ಮಾಡುವ ಮೂಲಕ ಗ್ರಾಹಕರಿಗೆ ಶಾಕ್ ನೀಡಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತಮ್ಮ ಗುಂಪಿನ ಎಟಿಎಂಗಳಲ್ಲಿ ಮಾಸಿಕ 5 ಡ್ರಾಗಳಿಗೆ ಶುಲ್ಕದಿಂದ ವಿನಾಯಿತಿ ನೀಡಿದೆ. ಅದು ಕೂಡ ಕನಿಷ್ಠ 1 ಲಕ್ಷ ರೂ. ಠೇವಣಿ ಇರಿಸಿದವರಿಗೆ ಮಾತ್ವ ಈ ನಿಯಮ ಅನ್ವಯವಾಗಲಿದೆ.
ಈ ಎಟಿಎಂ ನಿಯಮಗಳು ದೇಶದ 6 ಮೆಟ್ರೋ ನಗರಗಳಲ್ಲಿ ಮಾತ್ರ ಅನ್ವಯವಾಗಲಿದೆ. ಬೆಂಗಳೂರು ಸೇರಿದಂತೆ ದೆಹಲಿ, ಮುಂಬೈ, ಕೋಲ್ಕತಾ, ಚೆನ್ನೈ ಮತ್ತು ಹೈದರಾಬಾದ್ ಗಳಲ್ಲಿ ನೂತನ ಶುಲ್ಕ ಪದ್ಧತಿ ಜಾರಿಗೆ ಬರಲಿದೆ.
ಇದಕ್ಕೂ ಮುನ್ನ 25 ಸಾವಿರ ರೂ. ಮೇಲ್ಪಟ್ಟ ಠೇವಣಿ ಹೊಂದಿದ್ದು, ಅನಿಮಿಯಿತ ವಿತ್ ಡ್ರಾ ಅವಕಾಶ ಮಾಡಿಕೊಡಲಾಗಿತ್ತು. ಆದರೆ ಇದೀಗ ಈ ಮೊತ್ತವನ್ನು ಕನಿಷ್ಠ 50 ಸಾವಿರ ರೂ.ಗೆ ಏರಿಸಲಾಗಿದೆ. ಆದರೆ ನಗರ ಪ್ರದೇಶಗಳಲ್ಲಿ ಎಸ್ ಬಿಐ ಗುಂಪಿನ ಎಟಿಎಂಗಳಲ್ಲಿ ಗರಿಷ್ಠ ಮೂರು ಬಾರಿ ಮಾತ್ರ ಉಚಿತವಾಗಿ ವಿತ್ ಡ್ರಾ ಮಾಡಬಹುದಾಗಿದೆ.
ಎಸ್ ಬಿಐ ಗ್ರಾಹಕರು ಇತರೆ ಬ್ಯಾಂಕ್ ಗಳ ಎಟಿಎಂಗಳಲ್ಲಿ ವಿತ್ ಡ್ರಾ ಮಾಡಿದರೆ, ಪ್ರತಿ ಡ್ರಾಗೆ 5 ರೂ.ನಿಂದ 20ರೂ.ಗೆ ಏರಿಸಲಾಗಿದೆ. ಆದರೆ ಇದು ವಿತ್ ಡ್ರಾ ಮಾದರಿಯನ್ನು ಅವಲಂಬಿಸಿರುತ್ತದೆ. ಎಸ್ ಬಿಐ ಎಟಿಎಂಗಳಿಗೆ ಆದರೆ 5 ರೂ. ಹಾಗೂ ಇತರೆ ಎಟಿಎಂಗಳಲ್ಲಿ ಆದರೆ 8 ರೂ. ಕನಿಷ್ಠ ಶುಲ್ಕ ವಸೂಲು ಮಾಡಲಾಗುವುದು.

Share this Story:

Follow Webdunia kannada

ಮುಂದಿನ ಸುದ್ದಿ

ಪಿಯುಸಿಯಲ್ಲಿ ಕಡಿಮೆ ಅಂಕ: ನೊಂದ ವಿದ್ಯಾರ್ಥಿನಿ ಆತ್ಮಹತ್ಯೆ