ಸೇನಾ ನೇಮಕಾತಿ ಅಗ್ನಿಪಥ್ ಯೋಜನೆಗೆ ದೇಶಾದ್ಯಂತ ಭಾರೀ ಪ್ರತಿಭಟನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಹಲವು ರಿಯಾಯಿತಿಗಳನ್ನು ಘೋಷಿಸಿದೆ.
ಅಗ್ನಿಪಥ್ ಯೋಜನೆಯಲ್ಲಿ ಕಾರ್ಯ ನಿರ್ವಹಿಸಿದ ಅಗ್ನಿವೀರರರಿಗೆ ಪೊಲೀಸ್ ಇಲಾಖೆ, ಸಿಎಆರ್ ಪಿಎಫ್, ಸಿಎಪಿಎಫ್ ಮತ್ತು ಸೇನೆಗಳಲ್ಲಿ ಶೇ.10ರಷ್ಟು ಮೀಸಲು ಘೋಷಿಸಲಾಗಿದೆ.
ಇದೇ ವೇಳೆ ಅಗ್ನಿವೀರ ಯೋಜನೆಯಲ್ಲಿ ಆರಂಭಿಕ ಎರಡು ವರ್ಷ ನೇಮಕಾತಿ ವೇಳೆ ಸಾಮಾನ್ಯ ವರ್ಗದವರ ವಯೋಮಿತಿಯಲ್ಲಿ 5 ವರ್ಷಗಳಿಗೆ ವಿಸ್ತರಿಸಲಾಗಿದೆ.
ಬಿಎಸ್ ಎಫ್, ಸಿಆರ್ ಪಿಎಫ್, ಐಟಿಬಿಪಿ ಮತ್ತು ಎಸ ಎಸ್ ಬಿ ಸೇರಿದಂತೆ ಸೇನೆಯ ೫ ವಿಭಾಗಗಳಲ್ಲಿ 73,219 ಉದ್ಯೋಗಗಳು ಖಾಲಿ ಆಗಲಿವೆ. ಪೊಲೀಸ್ ಇಲಾಖೆಯಲ್ಲಿ 18,124 ಉದ್ಯೋಗಗಳು ಸೃಷ್ಟಿಯಾಗಲಿವೆ. ಇದಲ್ಲದೇ 10 ಲಕ್ಷ ಉದ್ಯೋಗ ಅವಕಾಶ ಕಲ್ಪಿಸುವ ಸಿಎಪಿಎಫ್ ನಲ್ಲಿ ಕೂಡ ಶೇ.10ರಷ್ಟು ಮೀಸಲು ಕಲ್ಪಿಸಲಾಗುತ್ತಿದೆ.