Select Your Language

Notifications

webdunia
webdunia
webdunia
webdunia

ಡಾ ಕೃತಿಕಾ ರೆಡ್ಡಿ ಕೇಸ್: ಅಬ್ಬಾ.. ಡಾ ಮಹೇಂದ್ರ ರೆಡ್ಡಿಗಿತ್ತಾ ಇಂಥಾ ಖಯಾಲಿ

Dr Kritika Reddy-Dr Mahendra Reddy

Krishnaveni K

ಬೆಂಗಳೂರು , ಮಂಗಳವಾರ, 21 ಅಕ್ಟೋಬರ್ 2025 (09:52 IST)
ಬೆಂಗಳೂರು: ಡಾ ಕೃತಿಕಾ ರೆಡ್ಡಿ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ದಿನಕ್ಕೊಂದು ವಿಚಾರಗಳು ತಿಳಿದುಬರುತ್ತಿದೆ. ಆರೋಪಿ ಪತಿ ಡಾ ಮಹೇಂದ್ರ ರೆಡ್ಡಿಯ ಮತ್ತೊಂದು ಕರಾಳ ಮುಖ ಬಯಲಾಗಿದೆ.

ಪತ್ನಿಗೆ ಪ್ರೊಪೊಫೋಲ್ ಎನ್ನುವ ಅನಸ್ತೇಷಿಯಾ ಓವರ್ ಡೋಸ್ ನೀಡಿ ಮಹೇಂದ್ರ ರೆಡ್ಡಿ ಕೊಲೆ ಮಾಡಿದ್ದು ಇದೀಗ ತನಿಖೆಯಲ್ಲಿ ಬಯಲಾಗಿದೆ. ಆತನೇ ಇದೀಗ ಮೆಡಿಕಲ್ ಶಾಪ್ ಒಂದರಿಂದ ನಾನು ಸರ್ಜನ್ ಎಂದು ಹೇಳಿಕೊಂಡು ಅನಸ್ತೇಷಿಯಾ ಖರೀದಿ ಮಾಡಿದ್ದ ಎಂದು ಆತನೇ ಒಪ್ಪಿಕೊಂಡಿದ್ದಾನೆ.

ಏಪ್ರಿಲ್ ನಲ್ಲಿ ನಡೆದಿದ್ದ ಕೃತ್ಯ ಇದೀಗ ಎಫ್ಎಸ್ಎಲ್ ವರದಿಯಿಂದ ಬಹಿರಂಗವಾಗಿದೆ. ಇದರ ಬೆನ್ನಲ್ಲೇ ಮಹೇಂದ್ರ ರೆಡ್ಡಿಯನ್ನು ಪೊಲೀಸರು ಅರೆಸ್ಟ್ ಮಾಡಿ ತೀವ್ರ ವಿಚಾರಗೊಳಪಡಿಸುತ್ತಿದ್ದಾರೆ. ಈ ವೇಳೆ ಆತ ಕೃತ್ಯವೆಸಗಲು ಕಾರಣವೇನೆಂದು ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ.

ಮಹೇಂದ್ರ ರೆಡ್ಡಿಗೆ ಒಂದಲ್ಲಾ, ಎರಡಲ್ಲಾ ಹಲವು ಯುವತಿಯರೊಂದಿಗೆ ಅಕ್ರಮ ಸಂಬಂಧವಿತ್ತು. ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತ್ನಿಯನ್ನು ಮಹೇಂದ್ರ ರೆಡ್ಡಿ ಕೊಲೆ ಮಾಡಲು ಈ ಸಂಚು ರೂಪಿಸಿದ್ದ. ಕೇವಲ ಕರ್ನಾಟಕ ಮಾತ್ರವಲ್ಲ ಮುಂಬೈ ಸೇರಿದಂತೆ ಹಲವು ಕಡೆಗಳಲ್ಲಿ ಆತ ಯುವತಿಯರ ಜೊತೆ ಸಂಪರ್ಕ ಹೊಂದಿದ್ದ. ಹಲವು ಯುವತಿಯರ ಜೊತೆ ಈತ ಚೆಲ್ಲಾಟವಾಡಿದ್ದ. ಇದೀಗ ಈ ಅಕ್ರಮ ಸಂಬಂಧಗಳ ಸಲುವಾಗಿಯೇ ಕೃತಿಕಾಳನ್ನು ಹತ್ಯೆ ಮಾಡಿದ್ದನೇ ಎಂಬ ನಿಟ್ಟಿನಲ್ಲಿ ಆತನ ಫೋನ್ ಕರೆಗಳನ್ನು ಪರಿಶೀಲಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಆರ್ ಎಸ್ಎಸ್ ಜೊತೆ ಸಮರಕ್ಕಿಳಿದ ಪ್ರಿಯಾಂಕ್ ಖರ್ಗೆ ಮೇಲೆ ಪಕ್ಷದೊಳಗೇ ಅಪಸ್ವರ