Select Your Language

Notifications

webdunia
webdunia
webdunia
webdunia

ಕಬ್ಬನ್ ಪಾರ್ಕ್ ನಲ್ಲಿ ನಾಯಿಗಳ ಉಪಟಳ

ಕಬ್ಬನ್ ಪಾರ್ಕ್ ನಲ್ಲಿ ನಾಯಿಗಳ ಉಪಟಳ
bangalore , ಭಾನುವಾರ, 24 ಏಪ್ರಿಲ್ 2022 (19:21 IST)
ಸಿಲಿಕಾನ್ ಸಿಟಿ ಜನರ ಆಕರ್ಷಣೀಯ ಪ್ರವಾಸಿ ತಾಣವೆಂದ್ರೆ ಕಬ್ಬನ್ ಪಾರ್ಕ್. ಕಬ್ಬನ್ ಪಾರ್ಕ್ ಗೆ ನಿತ್ಯ ಸಾವಿರಾರು ಜನರು ವಾಕಿಂಗ್ ಮಾಡಲು ಬರ್ತಾರೆ. ಆದರ ಜೊತೆಗೆ ಶ್ವಾನಗಳನ್ನ ಕೂಡ ತಮ್ಮ ಜೊತೆಗೆ ಕರೆತಂದು ಕಬ್ಬನ್ ಪಾರ್ಕ್ ನ್ನ ಸ್ವಚ್ಛತೆಯನ್ನ ಹಾಳುಮಾಡುತ್ತಿದ್ದಾರೆ. ಇನ್ಮುಂದೆ ಹಾಗೆ ಮಾಡದೆ ಕಬ್ಬನ್ ಪಾರ್ಕ್ ನಲ್ಲಿ ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ತೋಟಗಾರಿಕಾ ಇಲಾಖೆ ಮುಂದಾಗಿದೆ.
ಕಬ್ಬನ್ ಪಾರ್ಕ್ನಲ್ಲಿ  ಬೀದಿನಾಯಿಗಳ ಜೊತೆ ಸಾಕು ನಾಯಿಗಳ ಹಾವಳಿ ಹೆಚ್ಚಾಗಿದೆ. ಬೆಳ್ಳಿಗೆ ಆದ್ರೆ ಸಾಕು ನಾಯಿಗಳನ್ನ ಕರೆತಂದು ಕಬ್ಬನ್ ಪಾರ್ಕ್ ನ್ನ ಸ್ವಚ್ಛತೆಯನ್ನ ಹಾಳುಮಾಡುತ್ತಾರೆ. ಸಾಕು ನಾಯಿಗಳನ್ನ ಕರೆತರುವ ಮುನ್ನ ನಿಯಮಗಳನ್ನ ಪಾಲನೆ ಮಾಡ್ತಿದರಾ? ಹೇಗೆ ಎಂಬುದನ್ನ ನೋಡಿ  ಉದ್ಯಾನದ ಒಳಗೆ ನಾಯಿಗಳನ್ನ ಬಿಡಲಾಗುತ್ತದೆ. ಹೀಗಾಗಿ ಉದ್ಯಾನವನದ ಏಳು ದ್ವಾರಗಳಲ್ಲಿ ಭದ್ರತಾ ಸಿಬ್ಬಂದಿಯನ್ನ ಕೂಡ ನಿಯೋಜಿಸಲಾಗಿದೆ.ಉದ್ಯಾನಕ್ಕೆ ಬರುವವರಿಗೆ ಹೈಕೋರ್ಟ್ ಹೊರಡಿಸಿರುವ ಮಾರ್ಗಸೂಚಿಗಳನ್ನು ಪಾಲಿಸುವಂತೆ ಸೂಚನೆ ಕೂಡ ನೀಡಲಾಗಿದೆ. ಆದ್ರೆ ಶ್ವಾನಗಳನ್ನ   ಕರೆತರುವ ಮಾಲೀಕರು  ಅಲ್ಲಲ್ಲೇ ಮಲ- ಮೂತ್ರ ವಿಸರ್ಜನೆ ಮಾಡುವ ಮೂಲಕ ಕಬ್ಬನ್ ಪಾರ್ಕ್ ನ್ನ ಅಂದವನ್ನ ಹಾಳುಮಾಡ್ತಿದ್ದಾರೆ.ನಿಯಮವನ್ನ ಗಾಳಿಗೆ ತೂರಿ ಸಾರ್ವಜನಿಕ ಪ್ರದೇಶವನ್ನ ಗಬ್ಬೆದ್ದುನಾರುವಂತೆ ಮಾಡ್ತಿದ್ದಾರೆ.
ಉದ್ಯಾನದ ಒಳಗೆ ಶ್ವಾನಗಳ ಪ್ರವೇಶಕ್ಕಿರುವ ಮಾರ್ಗಸೂಚಿ
 
• ನಾಯಿಗಳನ್ನ ಕರೆತರುವವರು  6 ಅಡಿಗಳಿಗಿಂತ ಕಡಿಮೆ ಉದ್ದದ ಸರಪಳಿಯಿಂದ ಕಟ್ಟೆ ನಿಯಂತ್ರಿಸಬೇಕು
 
• ರೇಬೀಸ್ ರೋಗ ನಿರೋಧಕ ಚುಚ್ಚುಮದ್ದು ಹಾಕಿಸಿರಬೇಕು.
 
• ನಾಯಿಗಳು ಮಾಡುವ ಮಲ ಮೂತ್ರವನ್ನು ಮಾಲಿಕರೇ ಸ್ವಚ್ಛಗೊಳಿಸಬೇಕು
 
• ಸಾಕು ನಾಯಿಗಳಿಗೆ ಉದ್ಯಾನದಲ್ಲಿ ಆಹಾರ ನೀಡಬಾರದು
 
* ಉಗ್ರ ಪ್ರಭಾವ ಮತ್ತು ದೊಡ್ಡ ಗಾತ್ರದ ನಾಯಿಗಳನ್ನು ಕರೆ ತರಬಾರದು
 
• ಸಾರ್ವಜನಿಕರಿಗೆ ತೊಂದರೆಯಾದಲ್ಲಿ ಮಾಲಿಕರೇ ಹೊಣೆ
ಕಬ್ಬನ್ ಪಾರ್ಕ್ ನಲ್ಲಿ ಸಾಕು ನಾಯಿಗಳ ಕುರಿತ ಮಾರ್ಗಸೂಚಿ ಬಿಡುಗಡೆ ಮಾಡಿದ್ರು. ಆ ನಿಯಮವನ್ನ ಮಾತ್ರ ಯಾರು ಪಾಲನೆ ಮಾಡ್ದೆ ಬೇಜಾವಬ್ದಾರಿಯುತವಾಗಿ ವರ್ತಿಸುತ್ತಿದ್ದಾರೆ. . ಆದ್ರೆ ಸಾಕು ನಾಯಿಗಳ ಕುರಿತ ಮಾರ್ಗಸೂಚಿ ಕಬ್ಬನ್ ಪಾರ್ಕ್ ನಲ್ಲಿ ಉಲ್ಲಂಘನೆಯಾಗ್ತಿದ್ರು   ಸುಮ್ಮನಿರಬೇಕಾದ ಅವಾರ್ಯತೆ ತೋಟಗಾರಿಕೆ ಇಲಾಖೆಗೆ ಎದುರಾಗಿದೆ. ಇಂಗ್ಲೀಷ್ ಮತ್ತು  ಕನ್ನಡ ಎರಡರಲ್ಲೂ ಮಾರ್ಗಸೂಚಿಯ ಪಾಲಕಗಳನ್ನ ಕಬ್ಬನ್ ಪಾರ್ಕ್ ನಲ್ಲಿ ಹಾಕಿದ್ರು. ಜನರು ಮಾತ್ರ ಕಿಚ್ಚಿತ್ತು ಬೆಲೆ ಇಲ್ಲದೇ ವರ್ತಿಸುತ್ತಿದ್ದಾರೆ. ಹೀಗಾಗಿ ಮುಂದೆ ಸರ್ಕಾರದ ಮಟ್ಟದಲ್ಲಿ ಸಭೆ ಮಾಡುವುದರ ಮೂಲಕ ಯಾರು ನಿಯಮ ಉಲ್ಲಂಘನೆ ಮಾಡ್ತಾರೆ ಅವರ ವಿರುಧ ನಿರ್ದಾಕ್ಷಿಣ್ಯವಾಗಿ ದಂಡ ವಿಧಿಸಲು ತೋಟಗಾರಿಕೆ ಇಲಾಖೆ ಮುಂದಾಗಿದೆ  .ಹೀಗಾಗಿ ಸರ್ಕಾರಕ್ಕೆ ಕೂಡ ದಂಡ ವಿಧಿಸಲು ಅನುಮತಿ ಕೋರಿ ತೋಟಗಾರಿಕಾ ಇಲಾಖೆ ಪತ್ರ ಬರೆದಿದ್ದಾರೆ. ಇನ್ಮೇಲೆ ನಿಯಮ ಉಲ್ಲಂಘನೆ ಮಾಡುವವರ ಮೇಲೆ ನಿಗಾವಹಿಸಲು ತೋಟಗಾರಿಕೆ ಇಲಾಖೆ ಸಜ್ಜಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನನ್ನ ಸಾವೇ ನಿನ್ನ ಮದುವೆ ಉಡುಗೊರೆ ಅಂತ ವಾಟ್ಸಪ್ ಮಾಡಿ ಪ್ರಿಯಕರ ಆತ್ಮಹತ್ಯೆ