ಬೆಂಗಳೂರು: ವಿಶ್ವದಲ್ಲೇ ಅತೀ ದುಬಾರಿಯಾಗಿರುವ ನಾಯಿಯೊಂದನ್ನು ಖರೀದಿ ಮಾಡಿದ್ದೇನೆಂದು ಹೇಳಿದ್ದ ಬೆಂಗಳೂರಿನ ಶ್ವಾನಪ್ರೇಮಿ ಸತೀಶ್‌ಗೆ ಇದೀಗ ಇಡಿ ಶಾಕ್ ನೀಡಿದೆ.
₹50 ಕೋಟಿ ರೂಪಾಯಿಯ ಶ್ವಾನವೊಂದನ್ನು ಖರೀದಿ ಮಾಡಿರುವುದಾಗಿ ಹೇಳಿದ ಬೆನ್ನಲ್ಲೇ ಪ್ರಕರಣ ದಾಖಲಿಸಿಕೊಂಡಿದ್ದ ಇಡಿ ಅಧಿಕಾರಿಗಳು ಇಂದು ಮನೆ ಮೇಲೆ ದಾಳಿ ನಡೆಸಿ ದಾಖಲೆ ಪರಿಶೀಲನೆ ನಡೆಸಿದ್ದಾರೆ.
ಈ ವೇಳೆ ಖರೀದಿ ಮಾಡಿದ ನಾಯಿಯ ಬೆಲೆ ₹50 ಕೋಟಿ ಅಲ್ಲ ಎಂದು ತಿಳಿದುಬಂದಿದೆ. ಸದ್ಯ ಸ್ಥಳದಲ್ಲೇ ಬೀಡುಬಿಟ್ಟಿರುವ ಅಧಿಕಾರಿಗಳಿ ಪರಿಶೀಲನೆ ಮುಂದುವರಿಸಿದ್ದಾರೆ.
ಸತೀಶ್ 50 ಕೋಟಿ ರೂ. ಕೊಟ್ಟು ಶ್ವಾನವೊಂದನ್ನು ಖರೀದಿ ಮಾಡಿರುವಿದಾಗಿ ಹೇಳಿಕೊಂಡಿದ್ದರು. ಕಾಡು ತೋಳ ಮತ್ತು ಕಕೇಶಿಯನ್ ಶೆಫರ್ಡ್ ತಳಿಯ ಮಿಶ್ರಣವಾಗಿರುವ ಇದನ್ನು ತೋಳನಾಯಿ ಎಂದೂ ಕರೆಯುತ್ತಾರೆ. ಸತೀಶ್ ಅವರು ವಿವಿಧ ತಳಿಯ ನಾಯಿಗಳನ್ನು ವಿದೇಶಗಳಿಂದ ಸಂಗ್ರಹಿಸುವ ಮೂಲಕ ಭಾರೀ ಖ್ಯಾತಿಯನ್ನು ಗಳಿಸಿದ್ದಾರೆ. ದುಬಾರಿ ಬೆಲೆಯ ನಾಯಿಗಳನ್ನು ಸಾಕಿ, ಈ ಮೂಲಕನೇ ಸುದ್ದಿಯಲ್ಲಿರುವ ಸತೀಶ್ ಅವರು ಬೆಂಗಳೂರಿನವರು.
ಇನ್ನೂ ಹಲವು ಕಾರ್ಯಕ್ರಮಗಳಲ್ಲೂ ತಮ್ಮ ನಾಯಿಗಳನ್ನು ಕರೆತರುತ್ತಾರೆ.