ಬೆಂಗಳೂರು: ರಾಜ್ಯದ ವಿವಿಧೆಡೆ ಈಗ ಮುಂಗಾರುಪೂರ್ವ ಮಳೆಯ ಅಬ್ಬರವಾಗಿದ್ದು ರಾಜ್ಯ ರಾಜಧಾನಿ ಬೆಂಗಳೂರು ಕೂಡಾ ಹೊರತಾಗಿಲ್ಲ. ಬೆಂಗಳೂರಿಗರಿಗೆ ಹವಾಮಾನ ಇಲಾಖೆ ಮುಂದಿನ ಐದು ದಿನಗಳಿಗೆ ಗುಡ್ ನ್ಯೂಸ್ ನೀಡಿದೆ.
ಈ ಬಾರಿ ಬೆಂಗಳೂರಿನಲ್ಲೂ ಕರಾವಳಿಯಂತೆ ವಿಪರೀತ ತಾಪಮಾನ ಕಂಡುಬರುತ್ತಿದೆ. ಸೆಖೆ, ಬಿಸಿಲಿನಿಂದ ತತ್ತಿರಿಸಿರುವ ಜನತೆಗೆ ನಿನ್ನೆ ಸಂಜೆ ವರುಣ ತಂಪೆರಗಿದ್ದ. ಮೆಜೆಸ್ಟಿಕ್, ಜಯನಗರ, ಶಾಂತಿನಗರ, ಕೆಆರ್ ಪುರಂ, ಹೆಬ್ಬಾಳ ಸೇರಿದಂತೆ ಬಹುತೇಕ ಕಡೆ ನಿನ್ನೆ ಸಂಜೆ ಭಾರೀ ಮಳೆಯಾಗಿತ್ತು.
ಇದೀಗ ಹವಾಮಾನ ವರದಿ ಪ್ರಕಾರ ಮುಂದಿನ 5 ದಿನಗಳಿಗೆ ಬೆಂಗಳೂರಿನಲ್ಲಿ ಸಂಜೆ ಮಳೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಮುಂದಿನ ಐದು ದಿನಗಳಿಗೆ ಬೆಂಗಳೂರಿನ ಬಹುತೇಕ ಕಡೆ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ವರದಿಗಳು ಹೇಳಿವೆ.
ಉಳಿದಂತೆ ರಾಜ್ಯದಲ್ಲಿ ದಕ್ಷಿಣ ಕನ್ನಡ, ಉಡುಪಿ, ಕೊಡಗು ಜಿಲ್ಲೆಗಳಲ್ಲೂ ವ್ಯಾಪಕ ಮಳೆಯಾಗುತ್ತಿದೆ. ಒಂದೆಡೆ ಭಾರೀ ಸೆಖೆ, ಬಿಸಿಲಿನ ವಾತಾವರಣವಿದ್ದರೆ ಅದರ ನಡುವೆ ಮಳೆಯಾಗುತ್ತಿರುವುದು ಕೊಂಚ ಮಟ್ಟಿಗೆ ಸಮಾಧಾನ ತಂದಿದೆ.