ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯ ಕರ್ನಾಟಕದ ಶ್ರೀಮಂತ ದೇವಾಲಯ ಎಂಬ ಖ್ಯಾತಿ ಪಡೆದುಕೊಂಡಿದೆ. ದೇವಾಲಯದ ಈ ವರ್ಷದ ಆದಾಯವೆಷ್ಟು ಇಲ್ಲಿದೆ ವಿವರ.
ನಾಗದೋಷ, ವಿವಾಹಾದಿ ಸಮಸ್ಯೆಗಳು ಸೇರಿದಂತೆ ನಾನಾ ಸಮಸ್ಯೆಗಳ ಪರಿಹಾರಕ್ಕಾಗಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ನಿತ್ಯವೂ ಸಾಕಷ್ಟು ಜನ ಭಕ್ತರು ಭೇಟಿ ನೀಡುತ್ತಿರುತ್ತಾರೆ. ಈ ಬಾರಿ ರಾಜ್ಯದ ಶ್ರೀಮಂತ ದೇವಾಲಯ ಎಂಬ ಹಣೆಪಟ್ಟಿ ಪಡೆದ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಆದಾಯವೂ ಭಾರೀ ಏರಿಕೆಯಾಗಿದೆ.
ಕಳೆದ ವರ್ಷ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಆದಾಯ 146.01 ಕೋಟಿ ರೂ.ಗಳಾಗಿತ್ತು. ಈ ವರ್ಷ ಕುಕ್ಕೆ ಸುಬ್ರಹ್ಮಣ್ಯ ಆದಾಯದಲ್ಲಿ ಮತ್ತಷ್ಟು ಏರಿಕೆಯಾಗಿದ್ದು 155.95 ಕೋಟಿ ರೂ.ಗೆ ತಲುಪಿದೆ.
ಸರ್ಪ ಸಂಸ್ಕಾರ, ನಾಗಪೂಜೆ, ಆಶ್ಲೇಷ ಬಲಿ ಸೇರಿದಂತೆ ವಿವಿಧ ಸೇವೆಗಳಿಂದ ದೇವಾಲಯದ ಆದಾಯದಲ್ಲಿ ಗಣನೀಯ ಏರಿಕೆಯಾಗಿದೆ. ಇನ್ನು ಅತೀ ಹೆಚ್ಚು ಆದಾಯ ಗಳಿಸುವ ರಾಜ್ಯದ ದೇವಾಲಯಗಳ ಪೈಕಿ ಕುಕ್ಕೆ ನಂ.1 ಸ್ಥಾನದಲ್ಲಿದ್ದರೆ, ಮಲೆ ಮಹದೇಶ್ವರ ದೇವಸ್ಥಾನ 31 ಕೋಟಿ ರೂ.ಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. 20 ಕೋಟಿ ರೂ.ಗಳ ಆದಾಯವಿರುವ ಕೊಲ್ಲೂರು ಮೂಕಾಂಬಿಕಾ ದೇವಾಲಯ ಮೂರನೇ ಸ್ಥಾನದಲ್ಲಿದೆ.