Webdunia - Bharat's app for daily news and videos

Install App

ವ್ಯಾಲೆಂಟೈನ್ ಡೇ: ನಾಯಿ ಮತ್ತು ಕತ್ತೆಗೆ ಮದುವೆಯಂತೆ..!?

ನಾಗಶ್ರೀ ಭಟ್
ಗುರುವಾರ, 15 ಫೆಬ್ರವರಿ 2018 (13:12 IST)
ವ್ಯಾಲೆಂಟೈನ್ಸ್ ಡೇ ಪ್ರತಿಭಟನೆಯಲ್ಲಿ ನಾಯಿ ಮತ್ತು ಕತ್ತೆಗೆ ಮದುವೆ ಮಾಡಿದ ಘಟನೆ ಚೆನ್ನೈನಲ್ಲಿ ನಡೆದಿದೆ. ಭಾರತ್ ಹಿಂದೂ ಮುಖಂಡರು ನಾಯಿ ಮತ್ತು ಕತ್ತೆಯ ಮದುವೆಯನ್ನು ಮಾಡಿಸಿದ್ದು ಚೆನ್ನೈ ಪೊಲೀಸರು ಈ ಪ್ರತಿಭಟನಾಕಾರರನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
 
ಚೆನ್ನೈನ ಚೂಲೈ ಎಂಬ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ನಾಯಿ ಮತ್ತು ಕತ್ತೆಯ ಹಣೆಗೆ ಅರಿಶಿಣವನ್ನು ಹಚ್ಚಿ ಶೃಂಗರಿಸಿ ಅವುಗಳ ಮೇಲೆ ಹೂವಿನ ಮಳೆಯನ್ನು ಸುರಿಸುವ ಮೂಲಕ ಪ್ರೇಮಿಗಳ ದಿನಕ್ಕೆ ತಮ್ಮ ವಿರೋಧವನ್ನು ತೋರಿದ್ದಾರೆ ಎಂದು ತಿಳಿದುಬಂದಿದೆ. ಪಕ್ಷದ ಕಾರ್ಯಕರ್ತರು ವ್ಯಾಲಂಟೈನ್ಸ್ ಡೇ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆಯನ್ನು ನಡೆಸಿದ್ದರು ಇದರಿಂದ ಸ್ವಲ್ಪ ಗೊಂದಲ ಪರಿಸ್ಥಿತಿ ನಿರ್ಮಾಣವಾಗಿದ್ದು ಸಂಘದ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.
 
ಪ್ರತಿಭಟನೆಯಲ್ಲಿ ಹಿಂದೂ ವಿವಾಹಗಳ ಆಚರಣೆಯಲ್ಲಿ ನಡೆಸುವಂತೆ ಹಲವು ವಸ್ತುಗಳಿಂದ ತುಂಬಿದ ಬುಟ್ಟಿಗಳನ್ನು ಮಹಿಳೆಯರು ಹೊತ್ತಿರುವುದು ವಿಶೇಷವಾಗಿತ್ತು. ಅಷ್ಟೇ ಅಲ್ಲ ಬಜರಂಗ ದಳದ ಸದಸ್ಯರು ಅಹಮದಾಬಾದ್‍‌ನ ಸಬರಮತಿ ನದಿ ಮುಂಭಾಗದಲ್ಲಿ ಪ್ರೇಮಿಗಳಿಗೆ ಕಿರುಕುಳ ನೀಡಿರುವುದು ವರದಿಯಾಗಿದ್ದು, ಹೈದರಾಬಾದ್‌ನಲ್ಲಿಯೂ ಸಹ ಬಜರಂಗದಳದ ಸದಸ್ಯರು ವ್ಯಾಲಂಟೈನ್ಸ್ ಡೇ ವಿರುದ್ಧ ಪ್ರತಿಭಟನೆಯನ್ನು ನಡೆಸಿದ್ದು ಪ್ರತಿಭಟನೆ ಮತ್ತು ಕಿರುಕುಳ ನೀಡಿರುವವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Pehalgam ದಾಳಿಯಾದ್ರೂ ಪ್ರವಾಸಿಗರಿಗೆ ಚಿಂತೆಯಿಲ್ಲ: ದಾಳಿ ನಡೆದ ಕಾಶ್ಮೀರಕ್ಕೆ ಪ್ರವಾಸಿಗರ ದಂಡು

Pehalgam attack: ಪಹಲ್ಗಾಮ್ ಉಗ್ರರ ಸಂಚು ಹೇಗಿತ್ತು, ದಾಳಿಗೆ ಮುನ್ನ ಏನು ಮಾಡಿದ್ದರು ಇಲ್ಲಿದೆ ವಿವರ

Arecanut price today: ಅಡಿಕೆ ಬೆಳೆಗಾರರಿಗೆ ಇಂದು ಬಂಪರ್ ಸುದ್ದಿ, ಇಂದಿನ ದರ ಎಷ್ಟಾಗಿದೆ ನೋಡಿ

Gold price today: ಅಕ್ಷಯ ತೃತೀಯಕ್ಕೆ ಮೊದಲು ಚಿನ್ನದ ದರ ಎಷ್ಟಾಗಿದೆ ನೋಡಿ

ಪಾಕಿಸ್ತಾನದಿಂದ ಡ್ರೈ ಫ್ರೂಟ್ಸ್ ಬಂದ್: ಭಾರತದಲ್ಲಿ ಡ್ರೈ ಫ್ರೂಟ್ಸ್ ರೇಟ್ ಜಾಸ್ತಿಯಾಗಲಿದೆ

ಮುಂದಿನ ಸುದ್ದಿ
Show comments