ಗೋವಿಜ್ಞಾನ ತರಬೇತಿ ಶಿಬಿರದಲ್ಲಿ ಏನೇನಿರುತ್ತೆ ಗೊತ್ತಾ?

ಬುಧವಾರ, 26 ಫೆಬ್ರವರಿ 2020 (18:26 IST)
ಗೋವಿಜ್ಞಾನ ಸಾವಯವ ಕೃಷಿ ಮತ್ತು ಸ್ವಾವಲಂಬಿ ಗ್ರಾಮ ನಿರ್ಮಾಣ ಕುರಿತಾದ ಮೂರು ದಿನಗಳ ಉಚಿತ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿದೆ.

ಫೆಬ್ರವರಿ 28 ರಿಂದ ಮಾರ್ಚ್ 1 ರವರೆಗೆ ಕಲಬುರಗಿ ತಾಲೂಕಿನ ಮುತ್ಯಾನ ಬಬಲಾದದ ಚನ್ನವೀರೇಶ್ವರ ಬೆಟ್ಟದಲ್ಲಿ ನಡೆಯಲಿದೆ.

ಪ್ರತಿದಿನ ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ತರಬೇತಿ ನಡೆಯಲಿದೆ. ನಾಂದೇಡದ ರಾಜೇಂದ್ರ ದೇವಣಿಕರ್ ಅವರೊಂದಿಗೆ ಗೋಪಾಲಕ ಸುಧೀಂದ್ರ ದೇಶಪಾಂಡೆ ಪ್ರಶಿಕ್ಷಣ ನೀಡಲಿದ್ದಾರೆ.

ಗೋ ಆಧಾರಿತ ಕಾಂಪೋಸ್ಟ್ ಗೊಬ್ಬರ ತಯಾರಿಕೆ, ಸಾವಯವ ಕೀಟ ನಾಶಕ, ನೈಸರ್ಗಿಕ ಸಾಬೂನು, ಗೋಮೂತ್ರ ಮುಲಾಮು, ದಂತ ಮಂಜನ, ಧೂಪಬತ್ತಿ, ಫಿನಾಯಿಲ್ ಸೇರಿದಂತೆ 30 ವಸ್ತುಗಳ ತಯಾರಿಕೆ ಬಗ್ಗೆ ಪ್ರಾತ್ಯಕ್ಷಿಕೆ ನೀಡಲಾಗುತ್ತದೆ.
ಶಿಬಿರಾರ್ಥಿಗಳಿಗೆ ಊಟ, ವಸತಿ ಸೌಲಭ್ಯವಿದೆ. ಆಸಕ್ತರು ನೋಂದಣಿಗಾಗಿ 8861217484 ಸಂಪರ್ಕಿಸಬಹುದಾಗಿದೆ.

 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಪಿಯುಸಿ ಪರೀಕ್ಷೆ ಬರೆಯೋ ವಿದ್ಯಾರ್ಥಿಗಳಿಗೆ ಬಸ್ ನಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ