Select Your Language

Notifications

webdunia
webdunia
webdunia
webdunia

ಪಾಪಿ ಪಾಕಿ ಹೇಳ್ತಿರೋದೇನು ಗೊತ್ತಾ?

ಪಾಪಿ ಪಾಕಿ ಹೇಳ್ತಿರೋದೇನು ಗೊತ್ತಾ?
ನವದೆಹಲಿ , ಮಂಗಳವಾರ, 26 ಫೆಬ್ರವರಿ 2019 (18:21 IST)
ಭಾರತೀಯ ವಾಯು ಪಡೆಯ ಜೆಟ್ ವಿಮಾನಗಳು ಗಡಿ ನಿಯಂತ್ರಣ ರೇಖೆ ದಾಟಿ ಬಾಂಬ್ ದಾಳಿ ನಡೆಸಿರುವುದನ್ನು ಖಚಿತಪಡಿಸಿರುವ ಪಾಕಿಸ್ತಾನ, ಲಾಸ್ ಏನೂ ಆಗಿಲ್ಲ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದೆ.

ಆಂತರಿಕ ಸೇವೆಗಳ ಸಾರ್ವಜನಿಕ ಸಂಪರ್ಕ ಮಹಾ ನಿರ್ದೇಶಕ ಹಾಗೂ ಮೇಜರ್ ಜನರಲ್ ಅಸೀಫ್ ಗಫೂರ್ ಮಾಡಿರುವ ಸರಣಿ ಟ್ವೀಟ್ಗಳಲ್ಲಿ ರೀತಿ ಹೇಳಿಕೊಂಡಿದ್ದಾರೆ. ಭಾರತೀಯ ಯುದ್ಧ ವಿಮಾನಗಳು ಸ್ವತಂತ್ರ ಜಮ್ಮು-ಕಾಶ್ಮೀರದ ಮುಜಫ್ಫರಾಬಾದ್ ವಲಯಕ್ಕೆ ನುಗ್ಗಿದ್ದವು. ಆದರೆ ಗಡಿ ನಿಯಂತ್ರಣ ರೇಖೆಯಲ್ಲೇ ಅವೆಲ್ಲ ಕೆಳಗೆ ಬಿದ್ದವು  ಎಂದು ತಿಳಿಸಿದ್ದಾರೆ.
ಯುದ್ಧ ವಿಮಾನಗಳು ಪಾಕಿಸ್ತಾನಕ್ಕೆ ಸೇರಿದ ಆಕಾಶದಲ್ಲಿ ಕೇವಲ ಮೂರ್ನಾಲ್ಕು ಮೈಲಿಗಳಷ್ಟು ಒಳಗೆ ಹಾರಾಡಲಷ್ಟೇ ಸಫಲವಾದವು. ಪಾಕಿಸ್ತಾನ ವಾಯು ಪಡೆಯು ಸಕಾಲಿಕ ಹಾಗೂ ಪರಿಣಾಮಕಾರಿ ಪ್ರತಿರೋಧ ಒಡ್ಡಿತುಎಂದು ಅವರು ಪ್ರತಿಪಾಸಿದ್ದಾರೆ.

ನಮ್ಮ ಪ್ರತಿರೋಧಕ್ಕೆ ಭಾರತೀಯ ಯುದ್ಧ ವಿಮಾನಗಳು ಮುಂದುವರೆಯಲಾಗದೆ ಅಲ್ಲೇ ತಾವು ತುಂಬಿಕೊಂಡು ತಂದಿದ್ದ ಬಾಂಬ್ಗಳನ್ನು ತೆರೆದ ಪ್ರದೇಶದಲ್ಲಿ ಸುರಿದವು. ಹೀಗಾಗಿ ಯಾವುದೇ ಆಸ್ತಿಪಾಸ್ತಿ ಅಥವಾ ಜೀವ ಹಾನಿಯಾಗಿಲ್ಲಎಂದು ಗಫೂರ್ ತಮ್ಮ ಟ್ವೀಟ್ನಲ್ಲಿ ಹೇಳಿಕೊಂಡಿದ್ದಾರೆ.
ಜಟ್ಟಿ ಕೆಳಗೆ ಬಿದ್ದರೂ ಮೀಸೆ ಮಾತ್ರ ಮಣ್ಣಾಗಲಿಲ್ಲ ಎನ್ನೋ ಹಾಗೆ ಪಾಪಿಸ್ತಾನ್ ಹೇಳಿಕೊಳ್ಳುತ್ತಿದೆ. 

 

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದ ಮೊದಲ ಹೈಟೆಕ್ ಕಾರ್ ಪಾರ್ಕ್ ಉದ್ಘಾಟನೆಗೆ ಸಿದ್ಧ