Publish Date: Mon, 25 Feb 2019 (17:24 IST)
Updated Date: Mon, 25 Feb 2019 (17:26 IST)
ಈ ಹಿಂದೆ ಪಾಕಿಸ್ತಾನ ಧ್ವಜ ಹಾರಿಸಿದವರಾರು? ಪಾಕಿಸ್ತಾನದ ಧ್ವಜವನ್ನು ತಮ್ಮ ಜೇಬಿನಲ್ಲಿ ಇಟ್ಟುಕೊಂಡು ಓಡಾಡಿದವರು ಯಾರು ಎಂಬುದು ಗೊತ್ತಿದೆ ಎಂದು ಅಹಿಂದ ಮುಖಂಡರೊಬ್ಬರು ಕೇಂದ್ರ ಮಾಜಿ ಸಚಿವ ಹಾಗೂ ಹಾಲಿ ಬಿಜೆಪಿ ಶಾಸಕರೊಬ್ಬರ ವಿರುದ್ಧ ಹರಿಹಾಯ್ದಿದ್ದಾರೆ.
ವಿಜಯಪುರದಲ್ಲಿ ಅಹಿಂದ ಮುಖಂಡ ಎಸ್. ಎಮ್.ಪಾಟೀಲ್ ಗಣಿಯಾರ್, ಕೇಂದ್ರ ಮಾಜಿ ಸಚಿವ ಹಾಗೂ ಬಿಜೆಪಿ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ವಿರುದ್ಧ ಕಿಡಿಕಾರಿದ್ದಾರೆ.
ಕಳೆದ ಬಾರಿ ಪತ್ರಿಕಾಗೋಷ್ಠಿಯಲ್ಲಿ ನಾನು ಹೇಳಿದ ವಿಷಯವನ್ನು ಕೆಲವರು ಪೇಸ್ ಬುಕ್ ನಲ್ಲಿ ತಿರುಚಿ ಬರೆದಿದ್ದಾರೆ. ಅವರಿಗೆ ತಕ್ಕ ಉತ್ತರ ನೀಡಿದ್ದೇನೆ ಎಂದರು.
ನಗರ ಶಾಸಕ ಕೂಡಾ ಶೃದ್ದಂಜಲಿ ಸಭೆ ನಡೆಸುವಾಗ ಏನು ಕಿತ್ತಿಕೊಳ್ಳತಾರ ಕಿತ್ತಕೊಳ್ಳಿ ಎಂದು ಕೀಳು ಹೇಳಿಕೆ ನೀಡಿದ್ದಾರೆ. ಸಾರ್ವಜನಿಕರು ಮಹಿಳೆಯರು ಇರುವ ಸಮಾರಂಭದಲ್ಲಿ ಇಂತಹ ಕೀಳು ಮಟ್ಟದ ಭಾಷೆಯಲ್ಲಿ ಶಾಸಕರು ಮಾತನಾಡುವದು ಅವರಿಗೆ ಸಂಸ್ಕೃತಿ ಇಲ್ಲ ಎಂಬುದನ್ನು ತೋರಿಸುತ್ತದೆ ಎಂದರು.
ಈ ಹಿಂದೆ ಸಿಂದಗಿಯಲ್ಲಿ ಪಾಕಿಸ್ತಾನದ ಧ್ವಜ ಹಾರಿಸಿದವರಾರು? ವಿಜಯಪುರ ನಗರದಲ್ಲಿ ಪಾಕಿಸ್ತಾನದ ಧ್ವಜವನ್ನು ಜೇಬಿನಲ್ಲಿ ಇಟ್ಟು ಕೊಂಡು ಓಡಾಡಿದವರಾರು? ಎಂದು ಅಹಿಂದ ಮುಖಂಡ ಗಣಿಯಾರ ಪ್ರಶ್ನೆ ಮಾಡಿದ್ದಾರೆ.