Publish Date: Mon, 08 Jan 2024 (19:00 IST)
Updated Date: Mon, 08 Jan 2024 (19:17 IST)
ಅಯೋಧ್ಯೆ : ಇದೇ ಜ .22 ರಂದು ಅಯೋಧ್ಯೆಯ ರಾಮಮಂದಿರದಲ್ಲಿ ಶ್ರೀರಾಮಚಂದ್ರನ ಮೂರ್ತಿ ಪ್ರತಿಷ್ಠಾಪನೆಯಾಗಲಿದ್ದು,ಸಮರೋಪಾದಿಯಲ್ಲಿ ಸಿದ್ದತಾ ಕಾರ್ಯಗಳು ನಡೆದಿವೆ. ಇದೇ ವೇಳೆ ಅಯೋಧ್ಯೆಯ ಶ್ರೀರಾಮಮಂದಿರ ರಾತ್ರಿಯಲ್ಲಿ ದೀಪಾಲಂಕಾರಗಳೊಂದಿಗೆ ಕಂಗೊಳಿಸುವ ಸೊಬಗಿನ ಛಾಯಾಚಿತ್ರಗಳನ್ನು ಅಯೋಧ್ಯಾ ಮಂದಿರ ಟ್ರಸ್ಟ್ ಬಿಡುಗಡೆ ಮಾಡಲಿದೆ.
ಮಂದಿರದ ಆವರಣ, ಜಟಾಯುವಿನ ಶಿಲ್ಪ, ಗರ್ಭಗುಡಿಯ ಸುತ್ತಲಿನ ವಿನ್ಯಾಸ ಹಾಗೂ ಮಹಡಿಯ ಕುಸುರಿ ಕಲೆಯುಳ್ಳ ಛಾವಣಿಯ ಚಿತ್ರಗಳನ್ನು ಅಯೋಧ್ಯಾ ಮಂದಿರ ಟ್ರಸ್ಟ್ ಬಿಡುಗಡೆ ಮಾಡಿದೆ.