Publish Date: Fri, 11 Jan 2019 (19:06 IST)
Updated Date: Fri, 11 Jan 2019 (19:07 IST)
ಮತ್ತೊಂದು ಗ್ಯಾಸ್ ಲೈನ್ ಲೀಕೇಜ್ ಆಗಿರುವ ಘಟನೆ ನಡೆದಿದ್ದು, ಸುತ್ತಲಿನ ಜನರಲ್ಲಿ ಕೆಲಕಾಲ ಆತಂಕ ಮನೆಮಾಡಿತ್ತು.
ಬೆಂಗಳೂರಿನ ಸರ್ಜಾಪುರ ರಸ್ತೆಯ ವಿಪ್ರೋ ಗೇಟ್ ಮುಂಭಾಗದಲ್ಲಿ ಘಟನೆ ನಡೆದಿದೆ. ಬಿಬಿಎಂಪಿ ಚರಂಡಿ ಕಾಮಗಾರಿ ಮಾಡುವ ವೇಳೆ ಅವಘಡ ಸಂಭವಿಸಿದೆ. ಅಪಾರ್ಟ್ಮೆಂಟ್ ಗಳಿಗೆ ಗ್ಯಾಸ್ ಪೂರೈಸುವ ಮಿನಿ ಪೈಪ್ ಗೆ ಹಾನಿಯಾಗಿದೆ.
ಗೇಲ್ ಗ್ಯಾಸ್ ಗೆ ಸೇರಿದ ಪೈಪ್ ಲೈನ್ ಲೀಕೇಜ್ ಆಗಿದೆ. ಗ್ಯಾಸ್ ಲೀಕೇಜನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದ ಸಿಬ್ಬಂದಿ. ಘಟನೆಯಿಂದಾಗಿ ಸರ್ಜಾಪುರ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು.