Publish Date: Sun, 30 Dec 2018 (06:17 IST)
Updated Date: Sun, 30 Dec 2018 (06:18 IST)
ಮೆಲ್ಬೋರ್ನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ತೃತೀಯ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭಿಕ ಮಯಾಂಕ್ ಅಗರ್ವಾಲ್ ಕುತ್ತಿಗೆಗೆ ಬಾಲ್ ತಗುಲಿ ಕೆಲ ಕಾಲ ಆತಂಕದ ಸ್ಥಿತಿ ನಿರ್ಮಾಣವಾಯಿತು.
ಶಾರ್ಟ್ ಲೆಗ್ ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಮಯಾಂಕ್ ಗೆ ಆಸೀಸ್ ಬ್ಯಾಟ್ಸ್ ಮನ್ ಉಸ್ಮಾನ್ ಖವಾಜ ಹೊಡೆದ ಬಾಲ್ ನೇರವಾಗಿ ಕುತ್ತಿಗೆಗೆ ತಾಕಿತ್ತು. ಕೆಲವು ಕಾಲ ನೋವಿನಿಂದ ನರಳಿದ ಮಯಾಂಕ್ ಸುತ್ತಲೂ ನೆರೆದ ಟೀಂ ಇಂಡಿಯಾ ಆಟಗಾರರು ಅವರ ಆರೋಗ್ಯ ವಿಚಾರಿಸಿದರು.
ಬಳಿಕ ಕೆಲವು ಕಾಲ ಮೈದಾನದಿಂದ ಹೊರ ನಡೆದ ಮಯಾಂಕ್ ತಂಡದ ಫಿಸಿಯೋ ಬಳಿ ಪರೀಕ್ಷೆ ನಡೆಸಿಕೊಂಡು ಮೈದಾನಕ್ಕೆ ಮರಳಿದರು. ಹೀಗಾಗಿ ಮಯಾಂಕ್ ಗೆ ಆದ ಗಾಯ ಗಂಭೀರವಲ್ಲ ಎಂದು ಖಚಿತವಾಯಿತು. ಇದು ಕನ್ನಡಿಗ ಬ್ಯಾಟ್ಸ್ ಮನ್ ಗೆ ಮೊದಲ ಟೆಸ್ಟ್ ಪಂದ್ಯವಾಗಿದ್ದು, ಈ ಪಂದ್ಯದಲ್ಲಿ ಅವರು ಅತ್ಯುತ್ತಮ ಬ್ಯಾಟಿಂಗ್ ಮಾಡಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ