Publish Date: Sat, 29 Dec 2018 (09:57 IST)
Updated Date: Sat, 29 Dec 2018 (09:58 IST)
ಮೆಲ್ಬೋರ್ನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ತೃತೀಯ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಆಟಗಾರರನ್ನು ಪದೇ ಪದೇ ಕೆಣಕುತ್ತಿದ್ದ ನಾಯಕ ಟಿಮ್ ಪೇಯ್ನ್ ಗೆ ಟೀಂ ಇಂಡಿಯಾ ವಿಕೆಟ್ ಕೀಪರ್ ರಿಷಬ್ ಪಂತ್ ಸರಿಯಾಗಿಯೇ ತಿರುಗೇಟು ಕೊಟ್ಟಿದ್ದಾರೆ.
ರಿಷಬ್ ಪಂತ್, ರೋಹಿತ್ ಶರ್ಮಾ ಸೇರಿದಂತೆ ಟೀಂ ಇಂಡಿಯಾ ಕ್ರಿಕೆಟಿಗರು ಬ್ಯಾಟಿಂಗ್ ಮಾಡುತ್ತಿದ್ದಾಗ ವಿಕೆಟ್ ಹಿಂದುಗಡೆ ಇದ್ದ ಪೇಯ್ನ್ ಮನಬಂದಂತೆ ಸ್ಲೆಡ್ಜಿಂಗ್ ಮಾಡಿ ಕೆಣಕುವ ಯತ್ನ ನಡೆಸಿದ್ದರು. ಆದರೆ ಇದಕ್ಕೆ ಭಾರತೀಯ ಆಟಗಾರರು ಪ್ರತಿಕ್ರಿಯಿಸಿರಲಿಲ್ಲ.
ಆದರೆ ಇದೀಗ ಆಸ್ಟ್ರೇಲಿಯಾ ಸೋಲಿನ ಸುಳಿಗೆ ಸಿಲುಕಿದ್ದು, ಇದರ ನಡುವೆಯೇ ರಿಷಬ್ ಟಿಮ್ ಪೇಯ್ನ್ ಗಾಯಕ್ಕೆ ಉಪ್ಪು ಸುರಿದಿದ್ದಾರೆ. ಆಸ್ಟ್ರೇಲಿಯಾ ದ್ವಿತೀಯ ಇನಿಂಗ್ಸ್ ನಲ್ಲಿ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಕ್ರೀಸ್ ಗೆ ಬಂದ ಟಿಮ್ ಪೇಯ್ನ್ ಗೆ ರಿಷಬ್ ಪಂತ್ ನೀವು ಮಾತನಾಡಲಷ್ಟೇ ಲಾಯಕ್ಕು. ನೀವೊಬ್ಬ ತಾತ್ಕಾಲಿಕ ನಾಯಕ’ ಎಂದು ಕಾಲೆಳೆದಿದ್ದಾರೆ. ಈ ಮೂಲಕ ತಮ್ಮನ್ನು ತಮಾಷೆ ಮಾಡಿದ್ದಕ್ಕೆ ಸರಿಯಾಗಿಯೇ ತಿರುಗೇಟುಕೊಟ್ಟಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ