Publish Date: Fri, 28 Dec 2018 (09:00 IST)
Updated Date: Fri, 28 Dec 2018 (09:04 IST)
ಮೆಲ್ಬೋರ್ನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ತೃತೀಯ ಟೆಸ್ಟ್ ಪಂದ್ಯದಲ್ಲೂ ಉಭಯ ತಂಡಗಳ ಆಟಗಾರರ ನಡುವೆ ಸಣ್ಣ ಮಟ್ಟಿಗೆ ಸ್ಲೆಡ್ಜಿಂಗ್ ಮುಂದುವರಿದಿದೆ.
ಮೊದಲ ಪಂದ್ಯದಲ್ಲಿ ವಿರಾಟ್-ಟಿಮ್ ಪೇಯ್ನ್ ಮಾತಿನ ಚಕಮಕಿ ಭಾರೀ ಸುದ್ದಿಯಾಗಿತ್ತು. ಈ ಪಂದ್ಯದಲ್ಲಿ ಇದುವರೆಗೆ ಭಾರತೀಯರು ಸುಮ್ಮನಿದ್ದರೂ ಆಸೀಸ್ ನಾಯಕ ಟಿಮ್ ಪೇಯ್ನ್, ರೋಹಿತ್ ಶರ್ಮಾರನ್ನು ಕೆಣಕುವ ಪ್ರಯತ್ನ ಮಾಡಿದ್ದಾರೆ.
ಜಿಗುಟು ಆಟವಾಡುತ್ತಿದ್ದ ರೋಹಿತ್ ಶರ್ಮಾರನ್ನು ವಿಕೆಟ್ ಕೀಪಿಂಗ್ ಮಾಡುತ್ತಿದ್ದ ಟಿಮ್ ಪೇಯ್ನ್ ಮಾತಿನ ಮೂಲಕ ಕೆಣಕಿ ಗಮನ ಹಾಳು ಮಾಡಲು ಯತ್ನಿಸಿದರು. ಈ ವೇಳೆ ನಾನ್ ಸ್ಟ್ರೈಕರ್ ಎಂಡ್ ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡುವ ಅಜಿಂಕ್ಯಾ ರೆಹಾನೆ ಇದ್ದರು. ನಥನ್ ಲಿಯೊನ್ ಬೌಲಿಂಗ್ ಮಾಡುತ್ತಿದ್ದಾಗ ತಮ್ಮ ಪಕ್ಕದಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಏರಾನ್ ಫಿಂಚ್ ಗೆ ರೋಹಿತ್ ಶರ್ಮಾಗೆ ಕೇಳುವಂತೆ ‘ಐಪಿಎಲ್ ನಲ್ಲಿ ಮುಂಬೈ ಸಪೋರ್ಟ್ ಮಾಡಬೇಕೋ, ರಾಜಸ್ಥಾನ್ ಸಪೋರ್ಟ್ ಮಾಡಬೇಕೋ ಎಂದು ಗೊಂದಲವಿದೆ. ಈ ಬಾಲ್ ನಲ್ಲಿ ಸಿಕ್ಸರ್ ಬಾರಿಸಿದರೆ ನನ್ನ ಬೆಂಬಲ ಮುಂಬೈಗೆ’ ಎಂದು ಪೇಯ್ನ್ ಕೆಣಕಿದ್ದಾರೆ. ಆದರೆ ಇದು ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ರೋಹಿತ್ ತಮ್ಮ ಪಾಡಿಗೆ ತಾವು ಆಡಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ