ಮೆಲ್ಬೋರ್ನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ತೃತೀಯ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ದ್ವಿತೀಯ ದಿನದಲ್ಲೂ ನಿಧಾನಗತಿಯ ಬ್ಯಾಟಿಂಗ್ ಮುಂದುವರಿಸಿದೆ.
ಮೊದಲ ದಿನ ಓವರ್ ಗೆ ಕೇವಲ 2.5 ರನ್ ನಂತೆ ಮಾಡಿದ್ದ ಭಾರತ ಇಂದೂ ಅದೇ ನಿಧಾನಗತಿಯ ರನ್ ಮುಂದುವರಿಸಿ ಇತ್ತೀಚೆಗಿನ ವರದಿ ಬಂದಾಗ 5 ವಿಕೆಟ್ ನಷ್ಟಕ್ಕೆ ಕೇವಲ 365 ರನ್ ಗಳಿಸಿದೆ. ನಿನ್ನೆ ಅಜೇಯರಾಗುಳಿದಿದ್ದ ಚೇತೇಶ್ವರ ಪೂಜಾರ ಇಂದು ಶತಕ (106) ಗಳಿಸಿ ಔಟಾದರೆ, ನಾಯಕ ವಿರಾಟ್ ಕೊಹ್ಲಿ (82) ಶತಕ ವಂಚಿತರಾದರು.
ಇದು ಸಪಾಟೆ ಪಿಚ್ ಆಗಿದ್ದು, ಇಲ್ಲಿ ಶತಕ ಗಳಿಸದೇ ಇದ್ದರೆ ಕೊಹ್ಲಿ ನಿವೃತ್ತಿಯಾಗಬೇಕು ಎಂದು ಆಸೀಸ್ ವೇಗಿ ಮಿಚೆಲ್ ಸ್ಟಾರ್ಕ್ ಸವಾಲೆಸೆದಿದ್ದರು. ಇದೀಗ ಕೊಹ್ಲಿ ಔಟಾಗುವುದರೊಂದಿಗೆ ಸ್ಟಾರ್ಕ್ ಸವಾಲು ಸವಾಲಾಗಿಯೇ ಉಳಿಯಿತು. ಒಂದೆಡೆ ಪಿಚ್ ಸಹಕರಿಸುತ್ತಿಲ್ಲ, ಇನ್ನೊಂದೆಡೆ ನಿಧಾನಗತಿಯ ಬ್ಯಾಟಿಂಗ್ ನಿಂದಾಗಿ ಆಸೀಸ್ ಬೌಲರ್ ಗಳು ಎರಡು ದಿನದಿಂದ ಬೆವರು ಸುರಿಸುವಂತಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ