Publish Date: Wed, 26 Dec 2018 (09:34 IST)
Updated Date: Wed, 26 Dec 2018 (09:36 IST)
ಮೆಲ್ಬೋರ್ನ್: ಆಸ್ಟ್ರೇಲಿಯಾ ವಿರುದ್ಧ ತೃತೀಯ ಟೆಸ್ಟ್ ಪಂದ್ಯದಲ್ಲಿ ಚೊಚ್ಚಲ ಪಂದ್ಯವಾಡುವ ಅವಕಾಶ ಪಡೆದಿರುವ ಕನ್ನಡಿಗ ಮಯಾಂಕ್ ಅಗರ್ವಾಲ್ ಅದನ್ನು ಚೆನ್ನಾಗಿಯೇ ಬಳಸಿಕೊಂಡಿದ್ದಾರೆ.
ತೃತೀಯ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡುತ್ತಿರುವ ಟೀಂ ಇಂಡಿಯಾ ಇತ್ತೀಚೆಗಿನ ವರದಿ ಬಂದಾಗ 1 ವಿಕೆಟ್ ನಷ್ಟಕ್ಕೆ 115 ರನ್ ಗಳಿಸಿದೆ. ಆರಂಭಿಕರಾಗಿ ಕಣಕ್ಕಿಳಿದ ಮಯಾಂಕ್ 68 ರನ್ ಗಳಿಸಿದ್ದು, ಶತಕ ಗಳಿಸಿದರೂ ಅಚ್ಚರಿಯಿಲ್ಲ. ಆದರೆ ಅವರ ಜತೆಗೆ ಹನುಮ ವಿಹಾರಿ ಹೊಸ ಆರಂಭಿಕರಾಗಿ ಕಣಕ್ಕಿಳಿದಿದ್ದರು.
ಈ ಇಬ್ಬರೂ ಜೋಡಿ ಆತ್ಮವಿಶ್ವಾಸದಿಂದಲೇ ಆರಂಭ ಒದಗಿಸಿತ್ತು. ಅದೆಷ್ಟೋ ದಿನಗಳ ನಂತರ ಟೀಂ ಇಂಡಿಯಾಗೆ ಉತ್ತಮ ಆರಂಭ ದೊರಕಿತ್ತು. ಆದರೆ ಬರೋಬ್ಬರಿ 66 ಎಸೆತ ಎದುರಿಸಿದ ಹನುಮ ವಿಹಾರಿ ಕೇವಲ 8 ರನ್ ಗಳಿಸಿ ಔಟಾದರು.
ಇದೀಗ ಮಯಾಂಕ್ ಜತೆಗೆ ಚೇತೇಶ್ವರ ಪೂಜಾರ ಕ್ರೀಸ್ ನಲ್ಲಿದ್ದು 33 ರನ್ ಗಳಿಸಿದ್ದಾರೆ. ಇವರಿಬ್ಬರೂ ಇದುವರೆಗೆ ಉತ್ತಮ ಜತೆಯಾಟವಾಡುತ್ತಿದ್ದಾರೆ. ಒಂದು ವೇಳೆ ಇಂದು ಮಯಾಂಕ್ ಶತಕ ಗಳಿಸಿದರೆ ಅವರಿಗೆ ಟೀಂ ಇಂಡಿಯಾದಲ್ಲಿ ಸ್ಥಾನ ಭದ್ರವಾಗಲಿದೆ. ಅತ್ತ ಗೆಳೆಯ ಕೆಎಲ್ ರಾಹುಲ್ ಗೆ ಬಾಗಿಲು ಮುಚ್ಚಲಿದೆ!
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ