Select Your Language

Notifications

webdunia
webdunia
webdunia
webdunia

ಜನ ನನ್ನ ಬಗ್ಗೆ ಏನು ಹೇಳಿದ್ರೂ ನಾ ಕೇರ್ ಮಾಡಲ್ಲ ಎಂದ ವಿರಾಟ್ ಕೊಹ್ಲಿ

ಜನ ನನ್ನ ಬಗ್ಗೆ ಏನು ಹೇಳಿದ್ರೂ ನಾ ಕೇರ್ ಮಾಡಲ್ಲ ಎಂದ ವಿರಾಟ್ ಕೊಹ್ಲಿ
ಮೆಲ್ಬೋರ್ನ್ , ಬುಧವಾರ, 26 ಡಿಸೆಂಬರ್ 2018 (09:16 IST)
ಮೆಲ್ಬೋರ್ನ್: ಜನ ನನ್ನ ಬಗ್ಗೆ ಏನು ಮಾತಾಡಿಕೊಳ್ಳುತ್ತಿದ್ದಾರೆ ಎಂದು ನನಗೆ ಊಹೆಯೂ ಇಲ್ಲ. ಯಾರು ಏನು ಅಂದರೂ ನಾನು ತಲೆಕೆಡಿಸಿಕೊಳ್ಳಲ್ಲ.. ಹೀಗಂತ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿಕೊಂಡಿದ್ದಾರೆ.


ಇತ್ತೀಚೆಗೆ ಮೈದಾನದಲ್ಲಿ ಅವರ ನಡವಳಿಕೆ ಬಗ್ಗೆ  ವ್ಯಾಪಕ ಟೀಕೆಗಳು ವ್ಯಕ್ತವಾದ ಬೆನ್ನಲ್ಲೇ ಕೊಹ್ಲಿ ಸುದ್ದಿಗೋಷ್ಠಿಯಲ್ಲಿ ಇದರ ಬಗ್ಗೆ ಪ್ರಶ್ನೆ ಎದುರಾಯಿತು. ಆಗ ಕೊಹ್ಲಿ ಹೀಗೆ ಪ್ರತಿಕ್ರಿಯಿಸಿದ್ದಾರೆ.

‘ನಾನು ಹೊರಜಗತ್ತಿಗೆ ನೋಡಿ ನಾನು ಹೀಗೆ ಮಾಡಿದೆ, ಹೀಗೆ ಮಾಡಬೇಕೆಂದಿದ್ದೆ, ನನ್ನ ಉದ್ದೇಶ ಇದಾಗಿತ್ತು ಎಂದು ಬ್ಯಾನರ್ ಹಿಡಿದು ಸಾಬೀತುಪಡಿಸಬೇಕಾಗಿಲ್ಲ. ಇದೆಲ್ಲಾ ಹೊರಗಡೆ ಆಗ್ತಿದೆ. ಅದರ ಬಗ್ಗೆ ನಾನ್ಯಾಕೆ ತಲೆಕೆಡಿಸಿಕೊಳ್ಳಲಿ’ ಎಂದು ಕೊಹ್ಲಿ ತಮ್ಮ ಎಂದಿನ ಶೈಲಿಯಲ್ಲಿ ಟೀಕಾಕಾರರಿಗೆ ತಿರುಗೇಟು ಕೊಟ್ಟಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಇಂಥಾ ಆಟಗಾರ ಭೂಮಿಯಲ್ಲೇ ಇಲ್ಲ ಎಂದು ಕೊಹ್ಲಿಯನ್ನು ಹೊಗಳಿದ ದಿಗ್ಗಜ ಯಾರು ಗೊತ್ತೇ?