Daily Horoscope

Select Your Language

Notifications

webdunia
webdunia
webdunia
webdunia

ಮೆಲ್ಬೋರ್ನ್ ಟೆಸ್ಟ್ ಗೂ ಮೊದಲು ಬ್ಯಾಟ್ಸ್ ಮನ್ ಗಳಿಗೆ ಎಚ್ಚರಿಕೆ ನೀಡಿದ ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ
ಮೆಲ್ಬೋರ್ನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಾಳೆಯಿಂದ ಆರಂಭವಾಗಲಿರುವ ತೃತೀಯ ಟೆಸ್ಟ್ ಪಂದ್ಯಕ್ಕೂ ಮೊದಲು ಟೀಂ ಇಂಡಿಯಾ ಬ್ಯಾಟ್ಸ್ ಮನ್ ಗಳಿಗೆ ನಾಯಕ ವಿರಾಟ್ ಕೊಹ್ಲಿ ಎಚ್ಚರಿಕೆ ನೀಡಿದ್ದಾರೆ.


ಇದುವರೆಗಿನ ಪಂದ್ಯದಲ್ಲಿ ಬೌಲರ್ ಗಳು ಉತ್ತಮವಾಗಿ ಬೌಲಿಂಗ್ ನಡೆಸಿ ವಿಕೆಟ್ ಕಿತ್ತಿದ್ದರೂ, ಬ್ಯಾಟ್ಸ್ ಮನ್ ಗಳು ರನ್ ಗಳಿಸದೇ ತಂಡ ಸೋಲುವಂತಾಗಿತ್ತು. ಅದರಲ್ಲೂ ಆರಂಭಿಕರು ಬೇಗನೇ ವಿಕೆಟ್ ಒಪ್ಪಿಸಿ ಸಂಕಷ್ಟಕ್ಕೀಡು ಮಾಡುತ್ತಿದ್ದರು.

ಹೀಗಾಗಿ ಇದೀಗ ತಂಡದ ಬ್ಯಾಟ್ಸ್ ಮನ್ ಗಳಿಗೆ ಕೊಹ್ಲಿ ಎಚ್ಚರಿಕೆ ನೀಡಿದ್ದಾರೆ. ‘ನಾನು ಯಾರನ್ನೂ ವೈಯಕ್ತಿಕವಾಗಿ ಹೇಳುವುದಿಲ್ಲ. ಆದರೆ ಎಲ್ಲರೂ ಗಮನಿಸಿದಂತೆ ಬೌಲರ್ ಗಳು ಉತ್ತಮ ಆಟ ಆಡಿದ್ದಾರೆ. ಆದರೆ ಬ್ಯಾಟ್ಸ್ ಮನ್ ಗಳು ಸಾಕಷ್ಟು ರನ್ ಗಳಿಸದೇ ಬೌಲರ್ ಗಳಿಗೆ ಏನೂ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಬ್ಯಾಟ್ಸ್ ಮನ್ ಗಳು ಜವಾಬ್ಧಾರಿ ತೆಗೆದುಕೊಂಡು ಸ್ಕೋರ್ ಬೋರ್ಡ್ ನಲ್ಲಿ ರನ್ ಪೇರಿಸುವುದರತ್ತ ಗಮನಹರಿಸಬೇಕು’ ಎಂದು ಕೊಹ್ಲಿ ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ಆಸ್ಟ್ರೇಲಿಯಾ ಟೆಸ್ಟ್: ತೃತೀಯ ಟೆಸ್ಟ್ ಗೆ ಟೀಂ ಇಂಡಿಯಾ ಘೋಷಣೆ! ಆರಂಭಿಕರಿಗೆ ಕೊಕ್!