Select Your Language

Notifications

webdunia
webdunia
webdunia
webdunia

ಕ್ರೀಸ್ ಗೆ ಬಂದು ವಿರಾಟ್ ಕೊಹ್ಲಿಗೆ ಆಸ್ಟ್ರೇಲಿಯನ್ ಅಭಿಮಾನಿಗಳಿಂದ ಕುಹುಕ

ಕ್ರೀಸ್ ಗೆ ಬಂದು ವಿರಾಟ್ ಕೊಹ್ಲಿಗೆ ಆಸ್ಟ್ರೇಲಿಯನ್ ಅಭಿಮಾನಿಗಳಿಂದ ಕುಹುಕ
ಮೆಲ್ಬೋರ್ನ್ , ಗುರುವಾರ, 27 ಡಿಸೆಂಬರ್ 2018 (09:33 IST)
ಮೆಲ್ಬೋರ್ನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ತೃತೀಯ ಟೆಸ್ಟ್ ಪಂದ್ಯದಲ್ಲಿ ಕ್ರೀಸ್ ಗೆ ಬ್ಯಾಟಿಂಗ್ ಮಾಡಲು ಬಂದ ವಿರಾಟ್ ಕೊಹ್ಲಿಗೆ ಅತಿಥೇಯ ರಾಷ್ಟ್ರದ ಅಭಿಮಾನಿಗಳು ಕುಹುಕವಾಡಿದ್ದಾರೆ.


ಅಭಿಮಾನಿಗಳ ಮೂದಲಿಕೆ ನಡುವೇ ಕ್ರೀಸ್ ಗೆ ಬಂದ ಕೊಹ್ಲಿಯನ್ನು ಆಸ್ಟ್ರೇಲಿಯಾ ಕ್ರಿಕೆಟಿಗರು ಸ್ವಲ್ಪ ಹೊತ್ತು ಕಾಯಿಸಿ ಮತ್ತಷ್ಟು ತಾಳ್ಮೆ ಪರೀಕ್ಷೆ ಮಾಡಿದ್ದಾರೆ.

ಕೊಹ್ಲಿ ಮತ್ತು ಪೇಯ್ನ್ ದ್ವಿತೀಯ ಟೆಸ್ಟ್ ನಲ್ಲಿ ಪರಸ್ಪರ ಮಾತಿನ ಚಕಮಕಿ ನಡೆಸಿದ್ದು ವಿವಾದಕ್ಕೀಡಾಗಿತ್ತು. ಇದಕ್ಕಿಂತ ಮೊದಲು ಹಲವು ಬಾರಿ ಆಸ್ಟ್ರೇಲಿಯನ್ ಕ್ರಿಕೆಟಿಗರು ಮತ್ತು ಕೊಹ್ಲಿ ನಡುವೆ ಮಾತಿನ ಚಕಮಕಿ ನಡೆದಿದೆ. ಇದರ ಪರಿಣಾಮವೇ ಕೊಹ್ಲಿಯನ್ನು ಆಸ್ಟ್ರೇಲಿಯನ್ ಅಭಿಮಾನಿಗಳೂ ಶತೃತ್ವದಿಂದಲೇ ನೋಡುತ್ತಾರೆ. ದ್ವಿತೀಯ ಟೆಸ್ಟ್ ಪಂದ್ಯದಲ್ಲೂ ಕೊಹ್ಲಿ ಕ್ರೀಸ್ ಗೆ ಬಂದಾಗ ಅಭಿಮಾನಿಗಳು ಮೂದಲಿಸಿದ್ದರು. ಇದೀಗ ಮತ್ತೆ ಕೊಹ್ಲಿಗೆ ಮೂದಲಿಕೆಯ ಸ್ವಾಗತ ದೊರಕಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ಆಸ್ಟ್ರೇಲಿಯಾ ಪಂದ್ಯದಲ್ಲಿ ಪ್ರೇಕ್ಷಕರು ಮಾಡಿದ ದಾಖಲೆ