Publish Date: Thu, 27 Dec 2018 (09:36 IST)
Updated Date: Thu, 27 Dec 2018 (09:38 IST)
ಮೆಲ್ಬೋರ್ನ್: ಕಳಪೆ ಫಾರ್ಮ್ ನಿಂದಾಗಿ ಆಸ್ಟ್ರೇಲಿಯಾ ವಿರುದ್ಧ ತೃತೀಯ ಟೆಸ್ಟ್ ಪಂದ್ಯದಿಂದ ಕೊಕ್ ಪಡೆದಿರುವ ಆರಂಭಿಕ ಕೆಎಲ್ ರಾಹುಲ್ ಬಗ್ಗೆ ಟ್ವಟಿರಗರು ಮನಬಂದಂತೆ ಟ್ರೋಲ್ ಮಾಡಿ ಕಾಲೆಳೆದಿದ್ದಾರೆ.
ಕೆಎಲ್ ರಾಹುಲ್ ರಿಂದ ತೆರವಾದ ಸ್ಥಾನಕ್ಕೆ ಬಂದ ಮತ್ತೊಬ್ಬ ಕನ್ನಡಿಗ ಬ್ಯಾಟ್ಸ್ ಮನ್ ಮಯಾಂಕ್ ಅಗರ್ವಾಲ್ ಭರ್ಜರಿಯಾಗಿಯೇ ಅರ್ಧಶತಕ ಗಳಿಸುವ ಮೂಲಕ ತಮ್ಮ ಸ್ಥಾನ ಭದ್ರಪಡಿಸಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಟ್ವಿಟರಿಗರು ರಾಹುಲ್ ವೃತ್ತಿ ಜೀವನದ ಕತೆ ಮುಗಿಯಿತು ಎಂದು ಬರೆದಿದ್ದಾರೆ.
ಕೆಎಲ್ ರಾಹುಲ್ ಗಡ್ಡ ಮುಟ್ಟಿ ನೋಡುವ ಮಯಾಂಕ್ ಫೋಟೋವನ್ನು ಪ್ರಕಟಿಸಿ ಮಗಾ ನಿನ್ನ ಕತೆ ಮುಗಿಯಿತು ಎಂದು ಹೇಳುವಂತೆ ಸಂಭಾಷಣೆ ಬರೆದಿದ್ದಾರೆ. ಅಷ್ಟೇ ಅಲ್ಲ, ರಾಹುಲ್ ಟೆಸ್ಟ್ ಕ್ರಿಕೆಟ್ ವೃತ್ತಿ ಇಲ್ಲಿಗೆ ಮುಗಿಯಿತು. ಇನ್ನು ಮಾಡೆಲಿಂಗ್ ಕಡೆಗೆ ಆರಾಮವಾಗಿ ಗಮನಕೊಡಬಹುದು ಎಂದು ತಮಾಷೆ ಮಾಡಿದ್ದಾರೆ.
ಮತ್ತೆ ಕೆಲವರು ಅಬ್ಬಾ ಅಂತೂ ಈ ರಾಹುಲ್ ಕಳಪೆ ಆಟ ನೋಡುವ ದೌರ್ಭಾಗ್ಯದಿಂದ ಮುಕ್ತಿ ಸಿಕ್ಕಿತು ಎಂದು ಬರೆದರೆ ಇನ್ನೊಬ್ಬರು ಮಯಾಂಕ್ ಗೆ ಅವಕಾಶ ಸಿಕ್ಕಿದ್ದಕ್ಕೆ ರಾಹುಲ್ ಗೆ ಧನ್ಯವಾದ ಹೇಳಬೇಕು. ತಾನು ಕಳಪೆ ಆಟವಾಡಿ ಮಯಾಂಕ್ ಗೆ ಸ್ಥಾನ ಕೊಡಿಸಿದರು ಎಂದು ಟಾಂಗ್ ಕೊಟ್ಟಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ