Publish Date: Sat, 22 Dec 2018 (09:55 IST)
Updated Date: Sat, 22 Dec 2018 (09:57 IST)
ಶಿವಮೊಗ್ಗ: ಗುಜರಾತ್ ವಿರುದ್ಧ ಸ್ವಲ್ಪದರಲ್ಲೇ ಗೆಲುವು ಮಿಸ್ ಮಾಡಿಕೊಂಡು ಡ್ರಾಗೆ ತೃಪ್ತಿಪಟ್ಟುಕೊಂಡಿದ್ದ ಕರ್ನಾಟಕ ಕ್ರಿಕೆಟ್ ತಂಡ ಇಂದು ದುರ್ಬಲ ರೈಲ್ವೇಸ್ ವಿರುದ್ಧ ರಣಜಿ ಪಂದ್ಯ ಆಡುತ್ತಿದೆ.
ಟಾಸ್ ಗೆದ್ದ ರೈಲ್ವೇಸ್ ಮೊದಲು ಬೌಲಿಂಗ್ ಆಯ್ದುಕೊಂಡಿದೆ. ಕರ್ನಾಟಕಕ್ಕೆ ಸುಲಭ ಎದುರಾಳಿ ವಿರುದ್ಧ ಗೆಲ್ಲುವ ತವಕವಾದರೂ ಮಯಾಂಕ್ ಅಗರ್ವಾಲ್, ಕರುಣ್ ನಾಯರ್ ರಂತಹ ಪ್ರಮುಖ ಆಟಗಾರರ ಅನುಪಸ್ಥಿತಿಯಿಂದ ಒತ್ತಡದಲ್ಲಿದೆ.
ಹಾಗಿದ್ದರೂ ತವರು ನೆಲದಲ್ಲಿ ಪಂದ್ಯ ನಡೆಯುತ್ತಿರುವುದರಿಂದ ಕೊಂಚ ಸಮಾಧಾನಪಡಬಹುದಾಗಿದೆ. ಸದ್ಯಕ್ಕೆ ತನ್ನ ಗುಂಪಿನಲ್ಲಿ ಒಂದು ಗೆಲುವು, ಒಂದು ಸೋಲು ಮತ್ತು 3 ಡ್ರಾಗಳೊಂದಿಗೆ ಕರ್ನಾಟಕ 15 ಅಂಕ ಸಂಪಾದಿಸಿ ನಾಲ್ಕನೇ ಸ್ಥಾನದಲ್ಲಿದೆ. ಅಂಕ ಪಟ್ಟಿಯಲ್ಲಿ ಸ್ಥಾನ ಸುಧಾರಿಸಬೇಕಾದರೆ ಈ ಪಂದ್ಯದಲ್ಲಿ ಗೆಲುವು ದಾಖಲಿಸಬೇಕಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ