Select Your Language

Notifications

webdunia
webdunia
webdunia
webdunia

ಈಶ್ವರಪ್ಪಗೆ ಟಾಂಗ್ ಕೊಟ್ಟ ಡಿಕೆ ಶಿವಕುಮಾರ್

ಡಿಕೆ ಶಿವಕುಮಾರ್
ಬೆಂಗಳೂರು-ನಗರದಲ್ಲಿ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಡಿಕೆ ಶಿವಕಮಾರ್ ಚುನಾವಣೆ ಪ್ರಣಾಳಿಕೆ ತಯಾರಿಸುತ್ತಿದೇವೆ.ಜನರ ಅಭಿಪ್ರಾಯ ,ಸಂಘ ಸಂಸ್ಥೆಗಳ ಅಭಿಪ್ರಾಯ ಸಂಗ್ರಹಿಸುತ್ತಿದೇವೆ.ರಾಷ್ಟ್ರದಲ್ಲಿ ಭದ್ರತೆ ಬೇಕಿದೆ.ಎಲ್ಲ ಜನರಿಗೆ ರಕ್ಷಣೆ ಬೇಕಿದೆ.ಕರ್ನಾಟಕದ ಗ್ಯಾರೆಂಟಿಗಳು ಜನಮಾನಸವಾಗಿವೆ.ಭಾವನೆ ಬಿಟ್ಟು ಬದುಕು ಕಟ್ಟಬೇಕುಆ ಕೆಲಸವನ್ನ ಕಾಂಗ್ರೆಸ್ ಮಾಡಲಿದೆ.ರೈತರ ಜೀವನ ಕಟ್ಟುವ ಕೆಲಸ ಮಾಡ್ತೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
 
 ಇನ್ನೂ ಡಿಕೆ ಸುರೇಶ್ ಗೆ ಗುಂಡಿಡಬೇಕೆಂಬ ಈಶ್ವರಪ್ಪ ಹೇಳಿಕೆ ವಿಚಾರವಾಗಿ ಈಶ್ವರಪ್ಪ
ಅಸೆಂಬ್ಲಿಯಲ್ಲಿ ಏನೋ ಮಾತನಾಡಿದ್ರು.ನಮ್ಮ ತಂದೆಯವರ ಬಗ್ಗೆ ಮಾತನಾಡಿದ್ರು.ಈಗ ಈಶ್ವರಪ್ಪ ಎಲ್ಲಿದ್ದಾರೆ.ನಮ್ಮ ತಂಟೆಗೆ ಬಂದವರಿಗೆ ಸೆಟ್ಲ್ ಮೆಂಟ್ ಆಗ್ತಿದೆ.ಡಿಕೆ ಸುರೇಶ್ ಇಂತಹ ಗುಂಡಿಗೆಲ್ಲ ಹೆದರೊ ಬ್ಲೆಡ್ ಅಲ್ಲ ಕೆಂಪೇಗೌಡರ ಇತಿಹಾಸ ಗೊತ್ತಿದ್ಯಾ ಎಂದು ಈಶ್ವರಪ್ಪಗೆ ಡಿಕೆಶಿವಕುಮಾರ್ ಟಾಂಗ್ ಕೊಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಲೋಕಸಭೆ ಚುನಾವಣೆಗೆ ಮೊದಲು ಮಾಸ್ಟರ್ ಸ್ಟ್ರೋಕ್: ಸಿಎಎ ಜಾರಿಗೆ ಮುಂದಾದ ಕೇಂದ್ರ