Publish Date: Mon, 05 Feb 2024 (15:04 IST)
Updated Date: Mon, 05 Feb 2024 (20:24 IST)
ಬೆಂಗಳೂರು-ಯಡಿಯೂರಪ್ಪ ನಿವಾಸದ ಎದುರು ಈಶ್ವರಪ್ಪ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.ಸಿದ್ದರಾಮಯ್ಯ ಲೋಕಸಭೆ ಚುನಾವಣೆ ವರೆಗೂ ಶ್ವೇತಪತ್ರ ಹೊರಡಿಸಲ್ಲ.ಇದನ್ನು ನಾನು ಪದೇ ಪದೇ ಹೇಳಿದೀನಿ.ಯುಪಿಎ ಅವಧಿ ಮತ್ತು ಎನ್‌ಡಿಎ ಅವಧಿಯಲ್ಲಿ ಎಷ್ಟೆಷ್ಟು ಬಂತು ಅಂತ ಶ್ವೇತಪತ್ರ ಹೊರಡಿಲಿ.ದೆಹಲಿಯಲ್ಲಿ ಪ್ರತಿಭಟನೆಗೆ ಹೋಗುವ ಮೂಲಕ ಕರ್ನಾಟಕದ ಮಾನವನ್ನು ಸಿದ್ದರಾಮಯ್ಯ ಹರಾಜು ಮಾಡ್ತಿದ್ದಾರೆ.ಸಿದ್ದರಾಮಯ್ಯ, ಡಿಕೆಶಿ ಸುಳ್ಳುಗಳನ್ನು ಹೇಳಿ ರಾಜ್ಯದ ಜನರ ದಾರಿ ತಪ್ಪಿಸುತ್ತಿದ್ದಾರೆ.ಇವರು ಬರಗಾಲಕ್ಕೆ ಎಷ್ಟು ಕೊಟ್ರು? ಬೆಳೆ ಪರಿಹಾರಕ್ಕೆ ಯಾವ ಜಿಲ್ಲೆಗೆ ಎಷ್ಟು ಕೊಟ್ರು ಅಂತ ಹೇಳಲಿ ಎಂದು ಸಿದ್ದರಾಮಯ್ಯ ವಿರುದ್ಧ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ