Select Your Language

Notifications

webdunia
webdunia
webdunia
webdunia

ನಾವು ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ ತೆರೆಯಬೇಕೆಂದು ತೀರ್ಮಾನ..!

 ರಾಹುಲ್‌ ಗಾಂಧಿ

geetha

ಅಸ್ಸಾಂ , ಶನಿವಾರ, 3 ಫೆಬ್ರವರಿ 2024 (19:01 IST)
ಅಸ್ಸಾಂ :ಭಾರತ್‌ ಜೋಡೊ ನ್ಯಾಯ್‌ ಯಾತ್ರಾದಲ್ಲಿ ಪಾಲ್ಗೊಂಡು ಜನರನ್ನುದ್ದೇಶಿಸಿ ಮಾತನಾಡಿದ  ಕಾಂಗ್ರೆಸ್‌ ವರಿಷ್ಠ ರಾಹುಲ್‌ ಗಾಂದಿ ನಾವು ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ ತೆರೆಯಬೇಕೆಂದು ತೀರ್ಮಾನಿಸಿದ್ದೇವೆ ಎಂದು ಹೇಳಿದರು. ನಮ್ಮ ಯುದ್ದವು ಆರ್‌ಎಸ್‌ಎಸ್‌ ಮತ್ತು ಬಿಜೆಪಿ ಜನರ ಹೃದಯದಲ್ಲಿರುವ ದ್ವೇಷದ ವಿರುದ್ದವಾಗಿದೆ ಎಂದು ನುಡಿದ ರಾಹುಲ್‌ ಗಾಂಧಿ, ಅವರು ದ್ವೇಷದ ಮತ್ತು ಬೆದರಿಕೆಯಿಂದ ರಾಜಕಾರಣ ನಡೆಸುತ್ತಿದ್ದಾರೆ.  ಇದನ್ನು ಹೋಗಲಾಡಿಸಲು ನಾವು ಮಣಿಪುರದಿಂದ ಆರಂಭಿಸಿ ಜಾರ್ಖಂಡ್‌ ವರೆಗೆ ಯಾತ್ರೆ ನಡೆಸುತ್ತಿದ್ದೇವೆ  ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ.ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಜನರು ದೇಶದಲ್ಲಿ ದ್ವೇಷದ ದಳ್ಳುರಿಯನ್ನು ಹಬ್ಬಿಸುತ್ತಿದ್ದಾರೆ. ಇದಕ್ಕಾಗಿ ನಾವು ಭಾರತ್‌ ಜೋಡೋ ಯಾತ್ರೆ ಪ್ರಾರಂಭಿಸಿದೆವು ಎಂದು ಕಾಂಗ್ರೆಸ್‌ ವರಿಷ್ಠ ರಾಹುಲ್‌ ಗಾಂದಿ ಹೇಳಿದ್ದಾರೆ. 

ಇದೇ ವೇಳೆ ಜಾರ್ಖಂಡ್‌ ಸರ್ಕಾರವನ್ನು ಉರುಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ ರಾಹುಲ್ ಗಾಂಧಿ, ಈ ಪಿತೂರಿಯನ್ನು ಜನರು ವಿಫಲಗೊಳಿಸಿದ್ದಾರೆ. ನಾವು ಬಿಜೆಪಿಗೆ ಯಾವ ಕಾರಣಕ್ಕೂ ಹೆದರುವುದಿಲ್ಲ ಎಂದು ವಾಗ್ದಾಳಿ ನಡೆಸಿದರು. 
 

Share this Story:

Follow Webdunia kannada

ಮುಂದಿನ ಸುದ್ದಿ

ಗ್ಯಾನವ್ಯಾಪಿ ನೆಲಮಾಳಿಗೆಯಲ್ಲಿ ವಿಗ್ರಹಗಳ ಸ್ಥಾಪನೆ