Select Your Language

Notifications

webdunia
webdunia
webdunia
webdunia

ಗೃಹಸಚಿವ ಜಿ. ಪರಮೇಶ್ವರ್‌ ವಾರ್ನಿಂಗ್‌ ಗೆ ಈಶ್ವರಪ್ಪ ಸವಾಲ್‌

ಈಶ್ವರಪ್ಪ

geetha

ಶಿವಮೊಗ್ಗ , ಶುಕ್ರವಾರ, 9 ಫೆಬ್ರವರಿ 2024 (15:00 IST)
ಶಿವಮೊಗ್ಗ :ದಾವಣಗೆರೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಷಣದ ವೇಳೆ ಕೆ.ಎಸ್‌. ಈಶ್ವರಪ್ಪ ಡಿಸಿಎಂ ಡಿ.ಕೆ. ಶಿವಕುಮಾರ್‌ ಹಾಗೂ ಸಂಸದ ಡಿ.ಕೆ. ಸುರೇಶ್‌ ಇಬ್ಬರನ್ನೂ ಗುಂಡಿಟ್ಟು ಕೊಲ್ಲುವ ಕಾನೂನು ಬರಬೇಕು.ರಾಷ್ಟ್ರದ್ರೋಹಿಗಳಾದ ಇವರನ್ನು ಕಾಂಗ್ರೆಸ್‌ ತನ್ನ ಪಕ್ಷದಿಂದ ಹೊರಹಾಕಬೇಕು ಎಂದು ಹೇಳಿಕೆ ನೀಡಿದ್ದರು. ಈ ಕುರಿತು ಯಾರಾದರೂ ದೂರು ನೀಡಿದರೆ ಎಫ್‌ಐಆರ್‌ ದಾಖಲಿಸಿ ಕಾನೂನು ಕ್ರಮ ಜರುಗಿಸುವುದಾಗಿ ಗೃಹಸಚಿವ ಜಿ. ಪರಮೇಶ್ವರ್‌ ಇಂದು ಹೇಳಿದ್ದರು. 
 
ಇದಕ್ಕೆ ಪ್ರತಿಕ್ರಿಯಿಸಿರುವ ಕೆ.ಎಸ್‌. ಈಶ್ವರಪ್ಪ, ಡಿಕೆ ಸೋದರರು ಭಾರತವನ್ನು ವಿಭಜಿಸುವ ಹೇಳಿಕೆ ನೀಡಿದ್ದಾರೆ. ಇದಕ್ಕೆ ವಿನಯ್‌ ಕುಲಕರ್ಣಿ ಬೆಂಬಲ ನೀಡಿದ್ದಾರೆ. ಇವರ ಹೇಳಿಕೆಯನ್ನು ಸ್ವತಃ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಹಾಗೂ ಸಿಎಂ ಸಿದ್ದರಾಮಯ್ಯನವರೇ ಖಂಡಿಸಿದ್ದಾರೆ. ಒಂದು ವೇಳೆ ನನ್ನ ಮೇಲೆ ಕೇಸ್‌ ಹಾಕಿದರೆ ಮಲ್ಲಿಕಾರ್ಜುನ ಖರ್ಗೆ ಅವರೂ ಕೋರ್ಟಿಗೆ ಬರಬೇಕು ಎಂದರು. 

ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ  ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಗೃಹಸಚಿವ ಜಿ. ಪರಮೇಶ್ವರ್‌ ನೀಡಿರುವ ಹೇಳಿಕೆಗೆ ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ತನ್ನ ಹೇಳಿಕೆಗೆ ನಾನು ಈಗಲೂ ಬದ್ದನಾಗಿದ್ದೇನೆ. ತಾಕತ್ತಿದ್ದರೆ ನನ್ನ ಮೇಲೆ ಕೇಸ್‌ ಹಾಕಲಿ ಎಂದು ಈಶ್ವರಪ್ಪ ಗುಡುಗಿದ್ದಾರೆ. ಜೊತೆಗೆ, ನ್ಯಾಯಾಲಯವು ದೇಶಭಕ್ತರಿಗೆ ಮನ್ನಣೆ ನೀಡುವುದೋ ಇಲ್ಲವೋ ಎಂದು ತಿಳಿಯಲಿದೆ ಎಂದು ಕೆ.ಎಸ್‌. ಈಶ್ವರಪ್ಪ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಿನಲ್ಲಿ ಬೇಸಿಗೆಯ ಅಬ್ಬರ