Daily Horoscope

Select Your Language

Notifications

webdunia
webdunia
webdunia
webdunia

ಪ್ರಿಯಾಂಕ ಗಾಂಧಿ ವಾದ್ರಾ ಬುಲಾವ್: ಇಂದು ದಿಡೀರ್ ದೆಹಲಿಗೆ ತೆರಳಲಿರುವ ಡಿಕೆ ಶಿವಕುಮಾರ್

DK Shivakumar
ಬೆಂಗಳೂರು: ರಾಜ್ಯದಲ್ಲಿ ಒಂದೆಡೆ ನಾಯಕತ್ವ ಬದಲಾವಣೆ ವಿಚಾರವಾಗಿ ಫೈಟ್ ನಡೆಯುತ್ತಿದ್ದರೆ ಡಿಸಿಎಂ ಡಿಕೆ ಶಿವಕುಮಾರ್ ಗೆ ಪ್ರಿಯಾಂಕ ಗಾಂಧಿ ವಾದ್ರಾ ಬುಲಾವ್ ನೀಡಿದ್ದು ಇಂದು ದಿಡೀರ್ ದೆಹಲಿಗೆ ತೆರಳಲಿದ್ದಾರೆ.

ಡಿಕೆ ಶಿವಕುಮಾರ್ ದೆಹಲಿಗೆ ತೆರಳುತ್ತಿರುವುದಕ್ಕೂ ರಾಜ್ಯ ರಾಜಕೀಯದ ಬೆಳವಣಿಗೆಗೂ ನೇರ ಸಂಬಂಧವಿಲ್ಲ. ಆದರೆ ಇಂತಹ ಸಂದರ್ಭದಲ್ಲೇ ದೆಹಲಿಗೆ ತೆರಳುತ್ತಿರುವುದರಿಂದ ನಾಯಕತ್ವದ ವಿಚಾರವೂ ಚರ್ಚೆಯಾಗಬಹುದೇ ಎಂಬ ಕುತೂಹಲ ಮೂಡಿದೆ.

ಪಂಚ ರಾಜ್ಯ ಚುನಾವಣೆಗಳ ಪೈಕಿ ಅಸ್ಸಾಂ ರಾಜ್ಯದ ಚುನಾವಣೆಯಲ್ಲಿ ಕಾಂಗ್ರೆಸ್ ಉಸ್ತುವಾರಿ ಪ್ರಿಯಾಂಕ್ ವಾದ್ರಾರದ್ದು. ಈ ಕಮಿಟಿಯಲ್ಲಿ ಡಿಕೆ ಶಿವಕುಮಾರ್ ಕೂಡಾ ಇದ್ದಾರೆ. ಹೀಗಾಗಿ ಅಸ್ಸಾಂ ಚುನಾವಣೆ ಸಿದ್ಧತೆ ಬಗ್ಗೆ ಚರ್ಚಿಸಲು ಪ್ರಿಯಾಂಕ ಸಭೆ ಕರೆದಿದ್ದಾರೆ.

ಈ ಹಿನ್ನಲೆಯಲ್ಲಿ ಚರ್ಚೆ ನಡೆಸಲು ಡಿಕೆ ಶಿವಕುಮಾರ್ ಅವರನ್ನೂ ದೆಹಲಿಗೆ ಕರೆಸಲಾಗುತ್ತಿದೆ. ಇಂದು ಚುನಾವಣೆ ವಿಚಾರ ಮಾತ್ರ ಚರ್ಚೆಯಾಗುತ್ತದೋ ಅಥವಾ ನಾಯಕತ್ವ ಬದಲಾವಣೆ ವಿಚಾರವೂ ಚರ್ಚೆಗೆ ಬರಲಿದೆಯೇ ಎಂದು ಕಾದು ನೋಡಬೇಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೆಟ್ರೋ ದರ ಏರಿಕೆ ಕೇಂದ್ರ, ರಾಜ್ಯ ಜಟಾಪಟಿ: ಜನ ಮಾತ್ರ ಫುಲ್ ಕನ್ ಫ್ಯೂಸ್