Select Your Language

Notifications

webdunia
webdunia
webdunia
webdunia

ಮೋದಿ ದೇಶದ್ರೋಹಿ ಎಂದ ಕಾಂಗ್ರೆಸ್ ಶಾಸಕ ನಸೀರ್ ಅಹ್ಮದ್: ಹಾಗಿದ್ರೆ ರಾಹುಲ್ ಗಾಂಧಿ ಏನು ಎಂದು ಬಿಜೆಪಿ ತಿರುಗೇಟು

Karnataka BJP
ಬೆಂಗಳೂರು: ಪ್ರಧಾನಿ ಮೋದಿ ದೇಶದ್ರೋಹಿ ಎಂದು ಕಾಂಗ್ರೆಸ್ ಎಂಎಲ್ ಸಿ ನಸೀರ್ ಅಹ್ಮದ್ ಗೆ ರಾಜ್ಯ ಬಿಜೆಪಿ ಘಟಕ ತಿರುಗೇಟು ನೀಡಿದ್ದು ಹಾಗಿದ್ದರೆ ರಾಹುಲ್ ಗಾಂಧಿಯನ್ನು ಏನು ಹೇಳಬೇಕು ಎಂದು ಪ್ರಶ್ನೆ ಮಾಡಿದೆ.

ಸದನದಲ್ಲಿ ನಸೀರ್ ಅಹ್ಮದ್ ನಾಲಿಗೆ ಹರಿಯಬಿಟ್ಟಿದ್ದರು. ಇದು ಬಿಜೆಪಿ ಮತ್ತು ಕಾಂಗ್ರೆಸ್ ಶಾಸಕರ ನಡುವೆ ಭಾರೀ ಗದ್ದಲಕ್ಕೆ ಕಾರಣವಾಗಿತ್ತು. ಈ ಬಗ್ಗೆ ಈಗ ಸೋಷಿಯಲ್ ಮೀಡಿಯಾದಲ್ಲಿ ವಾಗ್ದಾಳಿ ನಡೆಸಿರುವ ಬಿಜೆಪಿ ‘ದೇಶದ ಪ್ರಧಾನಿ ಅವರನ್ನು ಅನಾವಶ್ಯಕವಾಗಿ ಸದನಕ್ಕೆ ಎಳೆದು ತಂದು ‌ʼದ್ರೋಹಿʼ ಎಂದಿರುವ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್‌ ಅಹ್ಮದ್‌ ಅವರ ನಡೆ ಖಂಡನೀಯ.

ಭಾರತವನ್ನು ವಿಶ್ವಮಾನ್ಯವಾಗಿಸಲು ಹಗಲಿರುಳು ಶ್ರಮಿಸುತ್ತಿರುವ ದೇಶಪ್ರೇಮಿಯನ್ನು ದ್ರೋಹಿ ಎನ್ನುವುದಾದರೆ, ಅಧಿಕಾರ ದಕ್ಕಿಸಿಕೊಳ್ಳಲಾರದ ಕಾರಣಕ್ಕಾಗಿ ರಾಜಕೀಯ ಪ್ರೇರಿತವಾಗಿ ದೇಶವನ್ನು ತೆಗಳುವ ಮಂದಬುದ್ಧಿಯ ಬಾಲಕ ಏನು ಎಂಬುದನ್ನು ಕಾಂಗ್ರೆಸ್ ನಾಯಕರು ಸ್ಪಷ್ಟಪಡಿಸಲಿ.

ಈ ಹಿಂದೆಯೂ ನಸೀರ್‌ ಅಹ್ಮದ್‌ ಪ್ರಧಾನಿಯನ್ನು ಫ್ರಾಡ್‌ ಎಂದು ಜರಿದಿದ್ದರು. ಈ ಪುನಾರಾವರ್ತಿತ ನಡವಳಿಕೆಯನ್ನು ಗಮನದಲ್ಲಿರಿಸಿಕೊಂಡು, ಸಭಾಪತಿಗಳು ನಸೀರ್‌ ಅವರನ್ನು ಪರಿಷತ್ತಿನಿಂದ ಅಮಾನತುಗೊಳಿಸಬೇಕು’ ಎಂದು ಆಕ್ರೋಶ ವ್ಯಕ್ತಪಡಿಸಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಅಮೆರಿಕಾ ಒತ್ತಡಕ್ಕೆ ಮಣಿದು ಮೋದಿ ದೇಶವನ್ನೇ ಮಾರಿದ್ದಾರೆ: ರಾಹುಲ್ ಗಾಂಧಿ