Daily Horoscope

Select Your Language

Notifications

webdunia
webdunia
webdunia
webdunia

ಮೆಟ್ರೋ ದರ ಏರಿಕೆ ಕೇಂದ್ರ, ರಾಜ್ಯ ಜಟಾಪಟಿ: ಜನ ಮಾತ್ರ ಫುಲ್ ಕನ್ ಫ್ಯೂಸ್

Namma Metro
ಬೆಂಗಳೂರು: ಬೆಂಗಳೂರು ಮೆಟ್ರೋ ದರ ಏರಿಕೆ ವಿಚಾರದಲ್ಲಿ ರಾಜ್ಯ ಮತ್ತು ಕೇಂದ್ರ ನಾನಲ್ಲ.. ನಾನಲ್ಲ ಎನ್ನುತ್ತಿದ್ದರೆ ಜನ ಮಾತ್ರ ಫುಲ್ ಕನ್ ಫ್ಯೂಸ್ ಆಗಿದ್ದಾರೆ.

ಮೆಟ್ರೋ ದರ ಏರಿಕೆ ಮಾಡಿದಾಗ ಬಿಜೆಪಿ ರಾಜ್ಯದ ಮೇಲೆ ಬೆರಳು ತೋರಿಸಿತ್ತು. ಇತ್ತ ಕಾಂಗ್ರೆಸ್ ನಾಯಕರು ಕೇಂದ್ರವೇ ಕಾರಣ ಎಂದಿದ್ದರು. ಕೊನೆಗೆ ಮೆಟ್ರೋ ದರ ಏರಿಕೆಗೆ ತಡೆ ನೀಡಿದಾಗ ಫುಲ್ ಉಲ್ಟಾ. ಬಿಜೆಪಿ ಕೇಂದ್ರದ ಸಾಧನೆ ಎನ್ನುತ್ತಿದ್ದರೆ ಡಿಸಿಎಂ ಡಿಕೆ ಶಿವಕುಮಾರ್ ನಮ್ಮದೇ ಸರ್ಕಾರದ ನಿರ್ಧಾರ ಎನ್ನುತ್ತಿದ್ದಾರೆ.

ಇದರಿಂದ ಜನ ಮಾತ್ರ ಫುಲ್ ಕನ್ ಫ್ಯೂಸ್ ಆಗಿದ್ದಾರೆ. ಇದೇನು ಆಟ? ಜನರನ್ನು ಮಂಗ ಮಾಡುತ್ತಿದ್ದೀರಾ ಎಂದು ಪ್ರಶ್ನೆ ಮಾಡಿದ್ದಾರೆ. ಏರಿಕೆಯಾದಾಗ ಇದೇ ನಾಯಕರು ಕೇಂದ್ರವೇ ದರ ಏರಿಕೆ ಮಾಡಿರುವುದು ಎಂದಿದ್ದರು. ಈಗ ಇಳಿಕೆ ಮಾಡಿದಾಗ ಇದಕ್ಕೂ ಕೇಂದ್ರಕ್ಕೂ ಸಂಬಂಧವಿಲ್ಲ ಎನ್ನುತ್ತಿದ್ದಾರೆ. ಹಾಗಿದ್ದರೆ ಮೆಟ್ರೋ ದರ ಏರಿಕೆಗೂ ಇಳಿಕೆಗೂ ಯಾರು ಕಾರಣ ಎಂದು ಪ್ರಶ್ನಿಸುತ್ತಿದ್ದಾರೆ.

ಅಸಲಿಗೆ ಮೆಟ್ರೋ ದರ ನಿಗದಿ ಮಾಡುವುದು ರಾಜ್ಯ ಮತ್ತು ಕೇಂದ್ರ ಸರ್ಕಾರ ನೇಮಿಸಿರುವ ದರ ನಿಗದಿ ಸಮಿತಿ. ಇದರ ರಾಜಕೀಯೇತರ ವ್ಯಕ್ತಿಗಳು ಸದಸ್ಯರಾಗಿದ್ದಾರೆ. ಮೆಟ್ರೋ ಯೋಜನೆಗೂ ಕೇಂದ್ರ ಮತ್ತು ರಾಜ್ಯ ಎರಡರ ಕೊಡಗೆಯಿರುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

Karnataka Weather: ರಾಜ್ಯದಲ್ಲಿ ಇಂದು ಮಳೆಯ ಸಾಧ್ಯತೆಯಿದೆಯಾ, ಹವಾಮಾನ ವರದಿ ಇಲ್ಲಿದೆ