Daily Horoscope
✕

ಒಪ್ಪಂದದ ಬಗ್ಗೆ ಸಂಚಲನ ಸೃಷ್ಟಿಸುತ್ತಿದೆ ಡಿಕೆ ಶಿವಕುಮಾರ್ ಇಂದಿನ ಟ್ವೀಟ್

Krishnaveni K
ಗುರುವಾರ, 27 ನವೆಂಬರ್ 2025 (10:07 IST)
ಬೆಂಗಳೂರು: ರಾಜ್ಯ ಕಾಂಗ್ರೆಸ್ ನಲ್ಲಿ ಈಗ ಅಧಿಕಾರ ಹಂಚಿಕೆ ವಿಚಾರ ಭಾರೀ ಸದ್ದು ಮಾಡುತ್ತಿದೆ. ಇದರ ನಡುವೆ ಡಿಸಿಎಂ ಡಿಕೆ ಶಿವಕುಮಾರ್ ಇಂದು ಮಾಡಿರುವ ಟ್ವೀಟ್ ಒಂದು ಸಂಚಲನ ಸೃಷ್ಟಿಸುತ್ತಿದೆ.

ಸಿಎಂ ಸಿದ್ದರಾಮಯ್ಯ ಮತ್ತು ಡಿಕೆಶಿ ನಡುವೆ ಕುರ್ಚಿ ಫೈಟ್ ಈಗ ಗುಟ್ಟಾಗಿಯೇನೂ ಉಳಿದಿಲ್ಲ. ಇದೀಗ ರಾಜ್ಯದ ಅಧಿಕಾರ ಹಂಚಿಕೆ ಕಲಹ ದೆಹಲಿಯಲ್ಲಿ ಹೈಕಮಾಂಡ್ ಅಂಗಳಕ್ಕೆ ಬಂದು ತಲುಪಿದೆ. ಹೈಕಮಾಂಡ್ ನಾಯಕರೇ ಈಗ ಸಮಸ್ಯೆ ಬಗೆಹರಿಸಲಿದ್ದಾರೆ.

ಇದರ ನಡುವೆ ಡಿಕೆ ಶಿವಕುಮಾರ್ ಈ ಹಿಂದೆ ತಮ್ಮ ಮತ್ತು ಹೈಕಮಾಂಡ್ ನಡುವೆ ನಡೆದ ಮಾತುಕತೆಗಳನ್ನೆಲ್ಲಾ ಮಾಧ್ಯಮಗಳ ಮುಂದೆ ಹೇಳಲ್ಲ ಎಂದಿದ್ದರು. ಇದೆಲ್ಲಾ ಗುಟ್ಟಿನ ವ್ಯಾಪಾರ ಎಂದಿದ್ದರು. ಆದರೆ ಅದರ ನಡುವೆ ಇಂದು ಡಿಕೆಶಿ ಕೊಟ್ಟ ಮಾತು ಉಳಿಸಿಕೊಳ್ಳುವುದರ ಬಗ್ಗೆ ಟ್ವೀಟ್ ಮಾಡಿದ್ದು ಎಲ್ಲರ ಗಮನ ಸೆಳೆಯುತ್ತಿದೆ.

ಒಬ್ಬ ನ್ಯಾಯಾಧೀಶ, ಅಧ್ಯಕ್ಷ ನನ್ನನ್ನೂ ಸೇರಿಸಿ ಯಾರೇ ಆಗಿರಲಿ, ಕೊಟ್ಟ ಮಾತು ಉಳಿಸಿಕೊಳ್ಳುವುದೇ ವಿಶ್ವದಲ್ಲಿರುವ ದೊಡ್ಡ ಶಕ್ತಿ ಎಂದು ಟ್ವೀಟ್ ಮಾಡಿದ್ದಾರೆ. ಅವರ ಈ ಟ್ವೀಟ್ ನಾನಾ ಅರ್ಥಗಳಿಗೆ ಕಾರಣವಾಗಿದೆ. ಇದು ಸಿದ್ದರಾಮಯ್ಯನವರನ್ನು ಉದ್ದೇಶಿಸಿ ಟಾಂಗ್ ಕೊಟ್ಟಿದ್ದಾ? ಅಥವಾ ಹೈಕಮಾಂಡ್ ಗೆ ನೀಡಿದ ಎಚ್ಚರಿಕೆಯಿರಬಹುದೇ ಎಂದು ವಿಶ್ಲೇಷಿಸಲಾಗುತ್ತಿದೆ. ಒಟ್ಟಿನಲ್ಲಿ ಅಧಿಕಾರ ಹಂಚಿಕೆ ಫೈಟ್ ನಡುವೆಯೇ ಡಿಕೆಶಿಯ ಈ ಒಂದು ಟ್ವೀಟ್ ಈಗ ಸಂಚಲನ ಸೃಷ್ಟಿಸುತ್ತಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಾಗರ್ ರತ್ನ 100% ಸಸ್ಯಾಹಾರಿ ಅಲ್ವೇ: ಬ್ರಿಕ್ಸ್‌ನಲ್ಲಿ ಸಸ್ಯಾಹಾರಿ ಮೆನು ಗೇಲಿ ಮಾಡಿದ್ದ ರಾಹುಲ್ ಗಾಂಧಿ ಕಾಲೆಳೆದ ಬಿಜೆಪಿ

ಸ್ಟಿಂಗ್ ಆಪರೇಷನ್‌ ಹೆಸರಿನಲ್ಲಿ ಬ್ಲ್ಯಾಕ್‌ಮೇಲ್ ಮಾಡುವ ಚರಿತ್ರೆ ಕಾಂಗ್ರೆಸ್‌ನದ್ದು: ಬಿ.ವೈ. ವಿಜಯೇಂದ್ರ

ಸಿಎಂ ಗಾದಿ ಉಳಿವಿಗಾಗಿ ಡಿ.ಕೆ. ಶಿವಕುಮಾರ್ ಸ್ವತಃ ಸ್ಟಿಂಗ್ ಆಪರೇಷನ್ ಮಾಡಿಸಿದ್ರಾ, ಕುಮಾರಸ್ವಾಮಿ ಬಾಂಬ್

Bengaluru: ಫುಟ್‌ಪಾತ್‌ನಲ್ಲೇ ಸಾವಿನ ದೃಶ್ಯ: ಟ್ರಾನ್ಸ್‌ಫಾರ್ಮರ್ ಬ್ಲಾಸ್ಟ್, ತೀವ್ರ ಸುಟ್ಟ ಗಾಯಗಳೊಂದಿಗೆ ಪಾರಾದ ಪಾದಚಾರಿ video

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ಮುಂದಿನ ಸುದ್ದಿ
Show comments