ಬೇಡ ಅನ್ನಕ್ಕಾಯ್ತದಾ.. ಡಿನ್ನರ್ ಮೀಟಿಂಗ್ ಬಗ್ಗೆ ಡಿಕೆ ಶಿವಕುಮಾರ್ ಸ್ಪೋಟಕ ಹೇಳಿಕೆ

Krishnaveni K
ಶುಕ್ರವಾರ, 12 ಡಿಸೆಂಬರ್ 2025 (11:10 IST)
ಬೆಳಗಾವಿ: ರಾಜ್ಯದಲ್ಲಿ ಈಗ ಡಿನ್ನರ್ ಮೀಟಿಂಗ್ ಭಾರೀ ಸದ್ದು ಮಾಡುತ್ತಿದೆ. ನಿನ್ನೆ ರಾತ್ರಿ ಆಪ್ತ ಬಳಗದವರೊಂದಿಗೆ ಡಿನ್ನರ್ ಮೀಟಿಂಗ್ ನಡೆಸಿದ ಬಗ್ಗೆ ಮಾತನಾಡಿರುವ ಡಿಸಿಎಂ ಡಿಕೆ ಶಿವಕುಮಾರ್ ಮಹತ್ವದ ಹೇಳಿಕೆ ನೀಡಿದ್ದಾರೆ.

ತಮ್ಮ ಆಪ್ತ ಬಳಗದ 30 ಕ್ಕೂ ಹೆಚ್ಚು ಶಾಸಕರು, ಸಚಿವರೊಂದಿಗೆ ಡಿಕೆ ಶಿವಕುಮಾರ್ ನಿನ್ನೆ ಬೆಳಗಾವಿಯಲ್ಲಿ ಆಪ್ತರ ಮನೆಯಲ್ಲಿ ಡಿನ್ನರ್ ಮೀಟಿಂಗ್ ಮಾಡಿದ್ದರು. ಈ ಬಗ್ಗೆ ಇಂದು ಮಾಧ್ಯಮಗಳು ಕೇಳಿದಾಗ ಅವರು ಇದರಲ್ಲಿ ಬೇರೆ ಯಾವುದೇ ಉದ್ದೇಶವಿಲ್ಲ ಎಂದಿದ್ದಾರೆ.

‘ಯಾವ ಔತಣಕೂಟನೂ ಇಲ್ಲ, ಅದು ನಮ್ಮ ಜಿಲ್ಲಾ ಕಾಂಗ್ರೆಸ್ ನ ಮಾಜಿ ಅಧ್ಯಕ್ಷರು ಅವರು. 15 ವರ್ಷದಿಂದ ಕೇಳ್ತಾ ಇದ್ದರು. ಒಂದು ಊಟಕ್ಕೆ ಬನ್ನಿ ಅಂತ. ಒಂದು ವರ್ಷವೇನೋ ಹೋಗಿದ್ವು ಅಷ್ಟೇ. ಅವರು ನಮ್ಮ ಕಾಂಗ್ರೆಸ್ ಪರಿವಾರದವರು. ಮರಿಯಕ್ಕಾಗಲ್ಲ.

ಈಗ ನೋಡಿ ಈ ಹುಡುಗ ಇಲ್ಲಿ ಕೆಲಸ ಮಾಡೋನು. ಈವತ್ತು ರಾಗಿ ಮುದ್ದೆ ಊಟ ತಂದು ಕೊಡ್ತೀನಿ ಎಂದಿದ್ದಾನೆ. ಬೇಡ ಅನ್ನಕ್ಕಾಯ್ತದಾ? ಪ್ರತಿನಿತ್ಯ ಒಬ್ಬೊಬ್ಬರು ಊಟ ತಂದುಕೊಡ್ತೀನಿ ಅಂತಾರೆ ಸ್ಥಳೀಯರು. ಅವರು ಪ್ರೀತಿಯಿಂದ ಕರೀತಾರೆ, ಒಂದೊಂದು ದಿನ ಹೋಗೋದು’ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕೇಂದ್ರದ ಮಾಜಿ ಸಚಿವ ಶಿವರಾಜ್ ಪಾಟೀಲ್ ಇನ್ನಿಲ್ಲ

ಸಿದ್ದರಾಮಯ್ಯ ಬಣಕ್ಕೆ ಸೆಡ್ಡು ಹೊಡೆಯಲು ಡಿಕೆ ಶಿವಕುಮಾರ್ ಮಹತ್ವದ ಹೆಜ್ಜೆ

ಡಿಕೆ ಶಿವಕುಮಾರ್ ಮೇಲೆ ಹೈಕಮಾಂಡ್ ಇಂಪ್ರೆಸ್ ಮಾಡಲು ಇದೊಂದು ವಿಷಯ ಸಾಕು

ಸಿದ್ದು ಡಿಕೆಶಿ ನಡುವೆ ತಣ್ಣಗಾಗಿದ್ದ ಸಿಎಂ ಕುರ್ಚಿ ಫೈಟ್ ಮತ್ತೆ ಭುಗಿಲೇಳಲು ಈ ಒಬ್ಬರೇ ಕಾರಣ

Karnataka Weather: ಕರ್ನಾಟಕದಲ್ಲಿ ಇಂದು ಹೇಗಿರಲಿದೆ ಹವಾಮಾನ ಇಲ್ಲಿದೆ ವರದಿ

ಮುಂದಿನ ಸುದ್ದಿ
Show comments