ವಿದ್ಯಾರ್ಥಿಗಳೇ ಗಮನಿಸಿ: ಎಸ್ಎಸ್ ಪಿ ಸ್ಕಾಲರ್ ಶಿಪ್ ಗೆ ಅರ್ಜಿ ಸಲ್ಲಿಸುಲು ಕೊನೆ ದಿನಾಂಕ, ಹೇಗೆ ನೋಡಿ

Krishnaveni K
ಶುಕ್ರವಾರ, 12 ಡಿಸೆಂಬರ್ 2025 (10:45 IST)
ಬೆಂಗಳೂರು: ಎಸ್ಎಸ್ ಪಿ ವಿದ್ಯಾರ್ಥಿ ವೇತನ ಎನ್ನುವುದು ವಿದ್ಯಾರ್ಥಿಗಳಿಗೆ ಶುಲ್ಕ ಮರುಪಾವತಿ, ಹಾಸ್ಟೆಲ್ ಶುಲ್ಕ, ವಿದ್ಯಾಸಿರಿ ಮುಂತಾದ ವಿದ್ಯಾರ್ಥಿ ವೇತನಗಳನ್ನು ಪಡೆಯಲು ಕರ್ನಾಟಕ ರಾಜ್ಯ ಸರ್ಕಾರದಿಂದ ನೀಡಲಾಗುವ ಮುಖ್ಯ ವಿದ್ಯಾರ್ಥಿ ವೇತನವಾಗಿದೆ.

ಇದಕ್ಕಾಗಿ ಪ್ರತಿವರ್ಷ ನೀವು ಎಸ್ಎಸ್ ಪಿ ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಬೇಕು. 1 ನೇ ತರಗತಿಯಿಂದ ಪಿಚ್ ಎಚ್ ಡಿ ವರೆಗೆ ಓದುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ವಿದ್ಯಾರ್ಥಿ ವೇತನ ಪಡೆಯಲು ಕಡ್ಡಾಯವಾಗಿ ನಿಮ್ಮ ಆಧಾರ್ ನಂಬರ್ ಜೊತೆಗೆ ಮೊಬೈಲ್ ನಂಬರ್ ಲಿಂಕ್ ಆಗಿರಬೇಕು.

10 ನೇ ತರಗಿತ ಕೆಳಗಿನ ವಿದ್ಯಾರ್ಥಿಗಳಿಗೆ ಅಗತ್ಯ ದಾಖಲೆಗಳು
-ವಿದ್ಯಾರ್ಥಿಗಳ ಎಸ್ಎಟಿಎಸ್ ಐಡಿ.
-ವಿದ್ಯಾರ್ಥಿ ಅಥವಾ ಪೋಷಕರ ಮೊಬೈಲ್ ಸಂಖ್ಯೆ
-ವಿದ್ಯಾರ್ಥಿ ಅಥವಾ ಪೋಷಕರ ಈಮೇಲ್ ವಿಳಾಸ
-ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ಆರ್ ಡಿ ಸಂಖ್ಯೆ
-ವಿಕಲಚೇತನರಾಗಿದ್ದಲ್ಲಿ ಯುಡಿಐಡಿ ಸಂಖ್ಯೆ
-ವಿದ್ಯಾರ್ಥಿಯ ವಿಳಾಸ
-ಹಾಸ್ಟೆಲ್ ವಿವರಗಳು (ಅನ್ವಯವಾದಲ್ಲಿ)

10 ನೇ ತರಗತಿ ಮೇಲಿನ ವಿದ್ಯಾರ್ಥಿಗಳಿಗೆ ಅಗತ್ಯ ದಾಖಲೆಗಳು
-ವಿದ್ಯಾರ್ಥಿಗಳ ಆಧಾರ್ ಸಂಖ್ಯೆ ಮತ್ತು ಅದರಲ್ಲಿರುವಂತೆ ಹೆಸರು
-ಪೋಷಕರ ಆಧಾರ್ ಸಂಖ್ಯೆ (ಅನ್ವಯವಾದಲ್ಲಿ)
-ವಿದ್ಯಾರ್ಥಿಗಳ ಮೊಬೈಲ್ ಮತ್ತು ಈ ಮೇಲ್ ಐಡಿ.
-ಎಸ್ಎಸ್ಎಲ್ ಸಿ ನೋಂದಣಿ ಸಂಖ್ಯೆ
-ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ಆರ್ ಡಿ ಸಂಖ್ಯೆ
-ವಿಕಲಚೇತನರಾಗಿದ್ದಲ್ಲಿ ಯುಡಿಐಡಿ ಸಂಖ್ಯೆ
-ವಿದ್ಯಾರ್ಥಿಯ ವಿಳಾಸ
-ವಿದ್ಯಾರ್ಥಿಯ ಕಾಲೇಜು ದಾಖಲಾತಿ, ನೋಂದಣಿ ಸಂಖ್ಯೆ
-ಸಂಬಂಧಪಟ್ಟ ಇ-ದೃಢೀಕರಣ ಸಂಖ್ಯೆ
-ಹಾಸ್ಟೆಲ್ ವಿವರಗಳು

ಎಸ್ಎಸ್ ಪಿ ವಿದ್ಯಾರ್ಥಿ  ವೇತನ ಕೊನೆಯ ದಿನಾಂಕ
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ 31-2-2026 (10 ನೇ ತರಗತಿ ಕೆಳಗಿನ ವಿದ್ಯಾರ್ಥಿಗಳಿಗೆ 20-12-2025 (10 ನೇ ತರಗತಿ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ)

ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ 31-1-2026 (10 ನೇ ತರಗತಿ ಕೆಳಗಿನ ವಿದ್ಯಾರ್ಥಿಗಳಿಗೆ 31-1-2026 (10 ನೇ ತರಗತಿ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ)

ಆರ್ಯ ವೈಶ್ಯ ಇಲಾಖೆ 28-2-2026 (10 ನೇ ತರಗತಿ ಮೇಲ್ಪಟ್ಟವರಿಗೆ)

ಬ್ರಾಹ್ಮಣ ಅಭಿವೃದ್ಧಿ ಮಂಡಳಿ 28-2-2026 (10 ನೇ ತರಗತಿ ಮೇಲ್ಪಟ್ಟವರಿಗೆ)

ತಾಂತ್ರಿಕ ಶಿಕ್ಷಣ ಇಲಾಖೆ 31-3-2026 (10 ನೇ ತರಗತಿ ಕೆಳಗಿನ ವಿದ್ಯಾರ್ಥಿಗಳಿಗೆ 31-12-2025 (10 ನೇ ತರಗತಿ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ)

ಅಂಗವಿಕಲರ ಕಲ್ಯಾಣ ಇಲಾಖೆ 31-12-2025 (10 ನೇ ತರಗತಿ ಕೆಳಗಿನ ವಿದ್ಯಾರ್ಥಿಗಳಿಗೆ 31-12-2025 (10 ನೇ ತರಗತಿ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ)

ಆಯುಷ್ ಇಲಾಖೆ 28-2-2026 (10 ನೇ ತರಗತಿ ಮೇಲ್ಪಟ್ಟವರಿಗೆ)

ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ 31-3-2026 (10 ನೇ ತರಗತಿ ಕೆಳಗಿನವರಿಗೆ)

ಸಮಾಜ ಕಲ್ಯಾಣ ಇಲಾಖೆ 15-1-2026 (10 ನೇ ತರಗತಿ ಕೆಳಗಿನ ವಿದ್ಯಾರ್ಥಿಗಳಿಗೆ 15-1-2026 (10 ನೇ ತರಗತಿ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ)

ಉಳಿದಂತೆ ಕೃಷಿ ಇಲಾಖೆ, ಕಾಲೇಜು ಶಿಕ್ಷಣ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆಯ ಸ್ಕಾಲರ್ ಶಿಪ್ ಗೆ ಅರ್ಜಿ ಇನ್ನೂ ಆಹ್ವಾನಿಸಿಲ್ಲ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕೇಂದ್ರದ ಮಾಜಿ ಸಚಿವ ಶಿವರಾಜ್ ಪಾಟೀಲ್ ಇನ್ನಿಲ್ಲ

ಸಿದ್ದರಾಮಯ್ಯ ಬಣಕ್ಕೆ ಸೆಡ್ಡು ಹೊಡೆಯಲು ಡಿಕೆ ಶಿವಕುಮಾರ್ ಮಹತ್ವದ ಹೆಜ್ಜೆ

ಡಿಕೆ ಶಿವಕುಮಾರ್ ಮೇಲೆ ಹೈಕಮಾಂಡ್ ಇಂಪ್ರೆಸ್ ಮಾಡಲು ಇದೊಂದು ವಿಷಯ ಸಾಕು

ಸಿದ್ದು ಡಿಕೆಶಿ ನಡುವೆ ತಣ್ಣಗಾಗಿದ್ದ ಸಿಎಂ ಕುರ್ಚಿ ಫೈಟ್ ಮತ್ತೆ ಭುಗಿಲೇಳಲು ಈ ಒಬ್ಬರೇ ಕಾರಣ

Karnataka Weather: ಕರ್ನಾಟಕದಲ್ಲಿ ಇಂದು ಹೇಗಿರಲಿದೆ ಹವಾಮಾನ ಇಲ್ಲಿದೆ ವರದಿ

ಮುಂದಿನ ಸುದ್ದಿ
Show comments