Select Your Language

Notifications

webdunia
webdunia
webdunia
webdunia

ಮಂಡ್ಯದವರನ್ನು ಛತ್ರಿಗಳು ಎಂದ ಡಿಸಿಎಂ ಡಿಕೆ ಶಿವಕುಮಾರ್: ಅಧಿಕಾರ ಕೊಟ್ಟಿದ್ದಕ್ಕೆ ಸರಿಯಾಗಿ ಮಾಡಿದ್ರಿ ಎಂದ ಜನ

DK Shivakumar

Krishnaveni K

ಮಂಡ್ಯ , ಗುರುವಾರ, 20 ಮಾರ್ಚ್ 2025 (12:07 IST)
ಮಂಡ್ಯ: ಡಿಸಿಎಂ ಡಿಕೆ ಶಿವಕುಮಾರ್ ಮಂಡ್ಯ ಜನರನ್ನು ಛತ್ರಿಗಳು ಎಂದು ಕರೆದಿದ್ದು ಈಗ ಭಾರೀ ವಿವಾದಕ್ಕೆ ಕಾರಣವಾಗಿದೆ. ನಿಮಗೆ ಅಧಿಕಾರಕ್ಕೆ ಕೊಟ್ಟಿದ್ದಕ್ಕೆ ನಮಗೆ ಸರಿಯಾಗಿ ಮಾಡಿದ್ರಿ ಎಂದು ಮಂಡ್ಯ ಜನ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಯೂತ್ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಮಾತನಾಡುವಾಗ ಡಿಕೆ ಶಿವಕುಮಾರ್ ಮಂಡ್ಯದವ್ರು ಛತ್ರಿಗಳು ಎಂಬ ಪದ ಬಳಸಿದ್ದರು. ಇದು ಮಂಡ್ಯ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಡಿಕೆಶಿ ವಿರುದ್ಧ ಸಾಕಷ್ಟು ಪೋಸ್ಟ್ ಮಾಡಲಾಗುತ್ತಿದೆ. ನಿಮಗೆ ಅಧಿಕಾರ ಕೊಟ್ಟವರೇ ನಾವು. ಮಂಡ್ಯದಲ್ಲೇ ಕಾಂಗ್ರೆಸ್ ಗೆ ಅತೀ ಹೆಚ್ಚು ಸ್ಥಾನ ಬಂದಿದ್ದು. ಈಗ ನಮ್ಮನ್ನೇ ಛತ್ರಿಗಳು ಅಂತೀರಾ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

Arecanut price today: ಅಡಿಕೆ, ಕಾಳುಮೆಣಸು ಇಂದಿನ ದರ ಹೀಗಿದೆ ನೋಡಿ