Select Your Language

Notifications

webdunia
webdunia
webdunia
webdunia

ಜಮೀನು ವಿವಾದ ಬಗೆಹರಿಸಲು ₹1ಲಕ್ಷ ಬೇಡಿಕೆ: ಗ್ರಾ.ಪಂ ಅಧ್ಯಕ್ಷೆಯ ಪತಿ, ಹಾಲಿ ಉಪಾಧ್ಯಕ್ಷ ಅರೆಸ್ಟ್‌

ShettyHalli Gram Panchayat Land Dispute, Mandya Land Dispute, Shekar Arrest

Sampriya

ಮಂಡ್ಯ , ಗುರುವಾರ, 6 ಫೆಬ್ರವರಿ 2025 (18:38 IST)
ಮಳವಳ್ಳಿ (ಮಂಡ್ಯ): ಜಮೀನು ವಿವಾದ ಬಗೆಹರಿಸಲು ₹1 ಲಕ್ಷ ಬೇಡಿಕೆಯಿಟ್ಟು ತಾಲ್ಲೂಕಿನ ಶೆಟ್ಟಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆಯ ಪತಿ ಶೇಖರ್ ಹಾಗೂ ಹಾಲಿ ಉಪಾಧ್ಯಕ್ಷ ಮನೋಹರ ಅರಸ್‌ ಅವರು ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದಾರೆ. ಇವರನ್ನು ಗುರುವಾರ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.

ಗ್ರಾಮದ ಗುರುಪ್ರಸಾದ್ ಎಂಬುವವರ ಜಮೀನು ಸರ್ಕಾರಿ ಶಾಲೆಗೆ ಹೊಂದಿಕೊಂಡಂತೆ ಇತ್ತು. ಈ ಬಗ್ಗೆ ಶಿಕ್ಷಣ ಇಲಾಖೆ ತಕರಾರು ಎತ್ತಿತ್ತು. ನಂತರ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಹದ್ದುಬಸ್ತು ನಿಗದಿಪಡಿಸಿದ್ದರು.

ಜಮೀನಿನ ವಿವಾದವನ್ನು ಬಗೆಹರಿಸಲು ಮಧ್ಯಪ್ರವೇಶಿಸಿದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾ ಅವರ ಪತಿ ಶೇಖರ್ ಹಾಗೂ ಉಪಾಧ್ಯಕ್ಷ ಮನೋಹರ ಅರಸ್‌ ಅವರು ₹12ಲಕ್ಷ ಬೇಡಿಕೆಯಿಟ್ಟಿದ್ದರು. ಅಂತಿಮವಾಗಿ ₹8 ಲಕ್ಷ ನೀಡಲು ಗುರುಪ್ರಸಾದ್ ಒಪ್ಪಿದ್ದರು.

ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಇನ್‌ಸ್ಪೆಕ್ಟರ್‌ ಬ್ಯಾಟರಾಯಗೌಡ ಮತ್ತು ಸಿಬ್ಬಂದಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬ್ಯಾಂಕ್ ವಂಚನೆ ಪ್ರಕರಣ: ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿಗೆ ಮೂರು ವರ್ಷ ಜೈಲು