ಬೆಂಗಳೂರು: ಬಿಟ್ ಕಾಯಿನ್ ಹಗರಣ ಪ್ರಕರಣದ ಸಂಬಂಧ ವಿಚಾರಣೆಗೆ ನೋಟಿಸ್ ನೀಡಿದ ಒಂದು ದಿನದ ಮುಂಚಿತವಾಗಿ ಯುವ ಕಾಂಗ್ರೆಸ್ ಅಧ್ಯಕ್ಷ ಮಹಮದ್ ನಲಪಾಡ್ ಹಾಜರಾಗಿ ಸುದ್ದಿಯಾಗಿದ್ದಾರೆ.
ಶುಕ್ರವಾರ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಎಸ್‌ಐಟಿ ನೋಟಿಸ್ ನೀಡಿತ್ತು. ಮಾಧ್ಯಮಗಳ ಕಣ್ತಪ್ಪಿಸೋ ಸಲುವಾಗಿ ಇಂದೇ ನಲಪಾಡ್ ವಿಚಾರಣೆಗೆ ಹಾಜರಾಗಿದ್ದಾರೆ. ತನಿಖಾಧಿಕಾರಿ ಡಿವೈಎಸ್ಪಿ ಬಾಲರಾಜು ಹೇಳಿಕೆ ದಾಖಲು ಮಾಡಿಕೊಳ್ಳುತ್ತಿದ್ದಾರೆ.
ನಲಪಾಡ್ ವಿರುದ್ಧ ಶ್ರೀಕಿ ಜೊತೆಗೆ ಸೇರಿ ಅವ್ಯವಹಾರಕ್ಕೆ ಕೈ ಜೋಡಿಸಿದ ಆರೋಪ ಮಾಡಲಾಗಿದೆ. ಅಲ್ಲದೇ ಶ್ರೀಕಿ ಜೊತೆಗೆ ಕೋಟ್ಯಂತರ ರೂ. ವ್ಯವಹಾರ ಹಿನ್ನೆಲೆಯಲ್ಲಿ ನೋಟಿಸ್ ನೀಡಲಾಗಿತ್ತು.
ಈ ಮೂಲಕ ಬಿಟ್ ಕಾಯಿನ್ ಪ್ರಕರಣದಲ್ಲಿ ನಲಪಾಡ್ ಅವರನ್ನು ಎಸ್‍ಐಟಿ ಆರೋಪಿ ಎಂದು ಪರಿಗಣಿಸಿತ್ತು. ಈ ಹಿಂದೆ ಹೇಳಿಕೆ ದಾಖಲು ಮಾಡಿದ್ದ ಎಸ್‍ಐಟಿ ಅಧಿಕಾರಿಗಳು. ಹೇಳಿಕೆಯ ಬಳಿಕ ಆರೋಪಿಯನ್ನಾಗಿಸಿತ್ತು.
ಪ್ರಕರಣದಲ್ಲಿ ಬಿಜೆಪಿ ಸರ್ಕಾರ ದುರುಪಯೋಗ ಮಾಡಿ ಕೋಟ್ಯಂತರ ರೂ. ಕೊಳ್ಳೆ ಹೊಡೆದಿದೆ ಎಂದು ಕಾಂಗ್ರೆಸ್ ಆರೋಪ ಮಾಡಿತ್ತು. ಅದರಂತೆ ಎಸ್‌ಐಟಿ ರಚನೆ ಮಾಡಿ ತನಿಖೆಗೆ ಆದೇಶಿಸಿತ್ತು.