ರಾಮನಗರ: ಎರಡು ಬಾರಿ ಚುನಾವಣೆಯಲಿ ಸೋತಿರುವ ನಾನು ಏನು ತಪ್ಪು ಮಾಡಿಲ್ಲ ಎಂದು ಗೊತ್ತಿಲ್ಲ ಮಾಜಿ ಪ್ರಧಾನಿ ಮತ್ತು ಮಾಜಿ ಮುಖ್ಯ ಮಂತ್ರಿ ಮಗನಾಗಿ ಹುಟ್ಟಿರುವುದೇ ನನ್ನ ದುರದೃಷ್ಟನೋ ಗೊತ್ತಿಲ್ಲ ಎಂದು ನಿಖಿಲ್ ಕುಮಾರಸ್ವಾಮಿ
ಅವರು ಕಣ್ಣೀರು ಹಾಕಿದರು.
ಕನ್ನಮಂಗಲ ಗ್ರಾಮದ ಪ್ರಚಾರ ಸಭೆಯಲ್ಲಿ ನಿಖಿಲ್ ಕುಮಾರಸ್ವಾಮಿ ಅವರು ಭಾವುಕರಾದರು. ಈ ಚುನಾವಣೆಯಲ್ಲಿ ನಾನು ಕಣ್ಣೀರು ಹಾಕಬಾರದು ಅಂನ್ಕೊಂಡಿದ್ದೇ. ಆದರೆ ಸಾಕಷ್ಟು ನೋವುಗಳಿವೆ ಎಂದು ಭಾಷಣದ ವೇಳೆ ಕಣ್ಣೀರು ಹಾಕಿದರು.
ಕಳೆದ ಎರಡು ಬಾರಿ ಚುನಾವಣೆಗೆ ಸ್ಪರ್ಧಿಸಿದ ವೇಳೆ ತುಂಬಾನೇ ಪೆಟ್ಟು. ಜನ ನನ್ನ ಪರವಾಗಿ ಮತ ಹಾಕಿದ್ದಾರೆ.ಆದರೆ ರಾಜಕೀಯ ಷಡ್ಯಂತ್ರಕ್ಕೆ ನಾನು ಬಲಿಯಾಗಿದ್ದೇನೆ. ಬಹಳ ನೋವಿನಲ್ಲಿ ಇದ್ದೇನೆ. ಪಕ್ಷದ ಕಾರ್ಯಕರ್ತರ ಒತ್ತಾಯಕ್ಕೆ ಮಣಿದು ಈ ಬಾರಿ ಚುನಾವಣೆಗೆ ನಿಂತಿದ್ದೇನೆ. ದಯವಿಟ್ಟು ಈ ಭಾರಿ ಈ ಯುವಕನನ್ನ ಗೆಲ್ಲಿಸಿ ಎಂದು ಎಂದು ಮನವಿ ಮಾಡಿದರು.
ಕಳೆದ ಭಾರಿ ಲೋಕ ಸಭೆಯಲ್ಲಿ ಮಂಡ್ಯ ಜಿಲ್ಲೆಯಲ್ಲಿ ಕಹಿ ಘಟನೆಯನ್ನು ನೆನೆಸಿಕೊಂಡು ನನ್ನ ಮೂಲಕ ಉತ್ತರ ಕೊಡ್ಬೇಕು ಅಂತ ಕಾರ್ಯಕರ್ತರ ಭಾವನೆಯಾಗಿತ್ತು ಅಂಬೇಡ್ಕರ್ ಭವನದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಏನಾಗಿತ್ತು ಅಂತ ಎಲ್ಲರಿಗೂ ಗೊತ್ತು ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.