ಡಿಕೆ ಶಿವಕುಮಾರ್ ಗೆ ಶೂ ಕಳ್ಳತನದ ಚಿಂತೆ, ಶೂ ಕಾಯಲು ಓರ್ವ ಭದ್ರತಾ ಸಿಬ್ಬಂದಿ

Krishnaveni K
ಶನಿವಾರ, 21 ಸೆಪ್ಟಂಬರ್ 2024 (14:25 IST)
ಚನ್ನಪಟ್ಟಣ: ಚನ್ನಪಟ್ಟಣದಲ್ಲಿ ಇಂದು ಅಭಿವೃದ್ಧಿ ಕಾರ್ಯಗಳ ಶಂಕು ಸ್ಥಾಪನೆಗೆ ಬಂದಿದ್ದ ಡಿಕೆ ಶಿವಕುಮಾರ್ ಗೆ ತಮ್ಮ ಶೂನದ್ದೇ ಚಿಂತೆಯಾಗಿದೆ. ಇದನ್ನು ಕಾಯಲು ಒಬ್ಬ ಭದ್ರತಾ ಸಿಬ್ಬಂದಿಯನ್ನಿಟ್ಟುಕೊಂಡಿದ್ದಾರೆ.

ಡಿಕೆ ಶಿವಕುಮಾರ್ ಎಲ್ಲೇ ಹೋದರೂ ಜನ ಅವರ ಬಳಿ ಮುತ್ತುವುದು ಸಹಜ. ಇಂದು ಚನ್ನಪಟ್ಟಣದಲ್ಲಿ ಶಂಕು ಸ್ಥಾಪನೆ ಕಾರ್ಯಕ್ರಮಕ್ಕೆ ಬಂದಿದ್ದಾಗಲೂ ಸಾಕಷ್ಟು ಜನ ಸೇರಿದ್ದರು. ಈ  ವೇಳೆ ಪುರೋಹಿತರು ಪೂಜೆ ಮಾಡುತ್ತಿದ್ದರು. ಈ ವೇಳೆ ಡಿಕೆಶಿ ತಮ್ಮ ಸಂಪುಟ ಸಹೋದ್ಯೋಗಿ ಜಮೀರ್ ಅಹ್ಮದ್ ಜೊತೆ ಬಂದಿದ್ದಾರೆ.

ಇಬ್ಬರೂ ಪೂಜೆಯಲ್ಲಿ ಪಾಲ್ಗೊಂಡಿದ್ದು ಬಳಿಕ ಶಂಕು ಸ್ಥಾಪನೆ ನೆರವೇರಿಸಿದರು. ಈ ವೇಳೆ ಸಾಕಷ್ಟು ಸಂಖ್ಯೆಯಲ್ಲಿ ಜನ ಸೇರಿದ್ದರು. ಪೂಜೆ ವೇಳೆ ಡಿಕೆಶಿ ತಮ್ಮ ಶೂ ಕಳಚಲೇ ಬೇಕಾಗಿತ್ತು. ಆದರೆ ಅವರಿಗೆ ಜನರ ನೂಕುನುಗ್ಗಲಿನ ನಡುವೆ ತಮ್ಮ ಶೂ ಎಲ್ಲಿ ಕಳೆದುಹೋಗುವುದೋ ಎಂಬ ಚಿಂತೆ.

ಈ ಕಾರಣಕ್ಕೆ ಪೂಜೆ ನಡೆಯುವ ಸ್ಥಳದಲ್ಲೇ ಒಂದು ಮೂಲೆಯಲ್ಲಿ ಶೂ ಕಳಚಿಟ್ಟ ಡಿಕೆ ಶಿವಕುಮಾರ್ ತಮ್ಮ  ಒಬ್ಬ ಭದ್ರತಾ ಸಿಬ್ಬಂದಿಯನ್ನು ಚಪ್ಪಲಿ ಕಾಯಲು ಅಲ್ಲೇ ನಿಲ್ಲಿಸಿದ್ದರು. ಆ ಭದ್ರತಾ ಸಿಬ್ಬಂದಿ ಆ ಚಪ್ಪಲಿಯನ್ನು ತನ್ನ ಕಾಲ ಮಧ್ಯೆಯೇ ಇಟ್ಟುಕೊಂಡು ಜೋಪಾನ ಮಾಡಿದ್ದಾನೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ವಿಧಾನಸಭೆ ಚುನಾವಣೆ, ಬಿಹಾರದಲ್ಲಿ ರಾಹುಲ್ ಗಾಂಧಿ ಮೊದಲ ರ್ಯಾಲಿ

ದ್ವೇಷ ಭಾಷಣ ಮಾಡುವವರ ಬಗ್ಗೆ ಮಂಗಳೂರಿನಲ್ಲಿ ಗುಡುಗಿದ ಸಿದ್ದರಾಮಯ್ಯ

ಮಹತ್ವದ ಪೋಸ್ಟ್ ಹಂಚಿಕೊಂಡ ಶ್ರೀರಾಮ ಜನ್ಮಭೂಮಿ ಟ್ರಸ್ಟ್‌

ತನ್ನವರನ್ನು ಕಳೆದುಕೊಂಡ ಸಂತ್ರಸ್ತರ ಕುಟುಂಬದ ಜತೆ ವಿಜಯ್ ನಡೆ ಹೇಗಿತ್ತು ಗೊತ್ತಾ

ಸಿಎಂ ಬದಲಾವಣೆ ಚರ್ಚೆಯ ನಡುವೆ ಸ್ಫೋಟಕ ಹೇಳಿಕೆ ಕೊಟ್ಟ ಸಿದ್ದರಾಮಯ್ಯ

ಮುಂದಿನ ಸುದ್ದಿ
Show comments