Select Your Language

Notifications

webdunia
webdunia
webdunia
webdunia

Bengaluru Rains: ತೆಪ್ಪದಲ್ಲಿ ಕೂತು ಡಿಕೆ ಶಿವಕುಮಾರ್ ಬೆಂಗಳೂರು ರೌಂಡ್ಸ್: ನೆಟ್ಟಿಗರು ಹೇಳಿದ್ದೇನು

DK Shivakumar

Krishnaveni K

ಬೆಂಗಳೂರು , ಮಂಗಳವಾರ, 20 ಮೇ 2025 (10:47 IST)
Photo Credit: X
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮಳೆ ಅಬ್ಬರ ಜೋರಾಗಿ ರಸ್ತೆಯೆಲ್ಲಾ ಹೊಳೆಯಂತಾಗಿದೆ. ಇದೀಗ ರಾಜ್ಯ ಬಿಜೆಪಿ ಘಟಕ ಇದನ್ನೇ ಗುರಿಯಾಗಿಟ್ಟುಕೊಂಡು ಡಿಕೆ ಶಿವಕುಮಾರ್ ತೆಪ್ಪದಲ್ಲಿ ಸಿಟಿ ರೌಂಡ್ಸ್ ಮಾಡುತ್ತಿರುವಂತೆ ಫೋಟೋ ಪ್ರಕಟಿಸಿ ಟ್ರೋಲ್ ಮಾಡಿದೆ. ಇದಕ್ಕೆ ನೆಟ್ಟಿಗರು ಹೇಳಿದ್ದೇನು ನೋಡಿ.

ಬೆಂಗಳೂರಿನಲ್ಲಿ ಸತತ ಮೂರು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿರುವ ಕಾರಣ ರಸ್ತೆಗಳಲ್ಲಿ ವಾಹನ ಸಂಚಾರ ಮಾಡಲಾಗದಷ್ಟು ನೀರು ತುಂಬಿಕೊಂಡಿದೆ. ಹಲವು ಮನೆಗಳಿಗೆ ನೀರು ನುಗ್ಗಿ ಜನರು ಪರದಾಡುವಂತಾಗಿದೆ.

ಇದೇ ಕಾರಣಕ್ಕೆ ರಾಜ್ಯ ಬಿಜೆಪಿ ತೆಪ್ಪದಲ್ಲಿ ಕುಳಿತು ಬ್ರ್ಯಾಂಡ್ ಬೆಂಗಳೂರು ಬಾವುಟ ಹಿಡಿದುಕೊಂಡು ಸಂಚರಿಸುತ್ತಿರುವ ಫೋಟೋವೊಂದನ್ನು ಹಾಕಿ ಟ್ರೋಲ್ ಮಾಡಿದೆ. ನೋಡಿ ನಮ್ಮ ಡಿಕೆ ಸಾಹೇಬ್ರು ಬ್ಯ್ರಾಂಡ್ ಬೆಂಗಳೂರು ಪ್ರಮೋಟ್ ಮಾಡುತ್ತಿದ್ದಾರೆ ಎಂದು ಲೇವಡಿ ಮಾಢಿದೆ.

ಇದಕ್ಕೆ ಹಲವರು ಕಾಮೆಂಟ್ ಮಾಡಿದ್ದಾರೆ. ಕೆಲವರು ಈ ರೀತಿ ತಮಾಷೆ ಮಾಡುವ ಬದಲು ನೀವು ಯಾಕೆ ವಿಪಕ್ಷವಾಗಿ ಒಳ್ಳೆಯ ಸಲಹೆ ನೀಡಬಾರದು ಎಂದು ಪ್ರಶ್ನೆ ಮಾಡಿದ್ದಾರೆ. ಮತ್ತೆ ಕೆಲವರು ಸದ್ಯದಲ್ಲೇ ನಮ್ಮ ಮೆಟ್ರೋ ನೀರಿನಲ್ಲೂ ಆರಂಭವಾಗಲಿದೆ ಎಂದು ತಮಾಷೆ ಮಾಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

India Pakistan: ಜವಹರಲಾಲ್ ನೆಹರೂ ಪಾಕಿಸ್ತಾನಕ್ಕೆ ನೀರು ಮಾತ್ರವಲ್ಲ ಹಣವನ್ನೂ ಕೊಟ್ಟಿದ್ದರು